ಮೊದಲ ದಿನ ಭಾರತದ ಗೌರವಾರ್ಹ ಮೊತ್ತ
ಎರಡನೇ ಟೆಸ್ಟ್: ಮಾಯಾಂಕ್, ಕೊಹ್ಲಿ ಅರ್ಧಶತಕ

ಜಮೈಕಾ, ಆ.31: ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್‌ವಾಲ್ ಅರ್ಧಶತಕಗಳ ನೆರವಿನಲ್ಲಿ ಭಾರತ ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನ ಗೌರವಾರ್ಹ ಮೊತ್ತ ದಾಖಲಿಸಿದೆ.
ಶುಕ್ರವಾರ ಸಬೀನಾ ಪಾರ್ಕ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆಇಳಿಸಲ್ಪಟ್ಟ ಭಾರತ ಅಗ್ರ ಸರದಿಯ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡರೂ ಕೊಹ್ಲಿ ಮತ್ತು ಅಗರ್‌ವಾಲ್‌ಅರ್ಧಶತಕಗಳನ್ನು ದಾಖಲಿಸುವ ಮೂಲಕ ತಂಡವನ್ನು ಕಷ್ಟದಿಂದ ಪಾರು ಮಾಡಿದರು. ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 264 ರನ್‌ಗಳಿಸಿತ್ತು.
ಆಟ ನಿಂತಾಗ 42 ರನ್ ಗಳಿಸಿರುವ ಹನುಮ ವಿಹಾರಿ ಮತ್ತು 27 ರನ್ ಗಳಿಸಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಭಾರತ 16.5 ಓವರ್‌ಗಳಲ್ಲಿ 46 ರನ್ ಗಳಿಸುವಷ್ಟರಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಜೇಸನ್ ಹೋಲ್ಡರ್ ಮತ್ತು ಚೊಚ್ಚಲ ಟೆಸ್ಟ್ ಆಡುತ್ತಿರುವ ರಹಕೀಮ್ ಕಾರ್ನ್ ವಾಲ್ ಅವರು ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದರು.
ಲೋಕೇಶ್ ರಾಹುಲ್ 13 ರನ್ ಮತ್ತು ಚೇತೇಶ್ವರ್ ಪೂಜಾರ 6 ರನ್ ಗಳಿಸಿ ಔಟಾದರು. ಮಾಯಾಂಕ್ ಅಗರ್‌ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಲೋಕೇಶ್ ರಾಹುಲ್ 6.5ನೇ ಓವರ್‌ನಲ್ಲಿ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಅವರ ಎಸೆತದಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕಾರ್ನ್ ವಾಲ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ವಾಪಸಾದರು.
ಮಾಯಾಂಕ್ ಅಗರವಾಲ್‌ಗೆ ಜೊತೆಯಾದ ಚೇತೇಶ್ವರ ಪೂಜಾರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕಾ
ರ್‌ವಾಲ್‌ರಎಸೆತದಲ್ಲಿ ಬ್ರೂಕ್ಸ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಧಡೂತಿ ದೇಹದ ಆಲ್‌ರೌಂಡರ್ ಕಾರ್ನ್‌ವಾಲ್ ಚೊಚ್ಚಲ ವಿಕೆಟ್ ಪಡೆದರು. ಪೂಜಾರ ಅವರು 25 ಎಸೆತಗಳನ್ನು ಎದುರಿಸಿ 6 ರನ್ ಗಳಿಸಲಷ್ಟೇ ಶಕ್ತರಾದರು.
ಮಾಯಾಂಕ್ ಅಗರ್‌ವಾಲ್‌ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆಯಾಗಿ ಮೂರನೇ ವಿಕೆಟ್‌ಗೆ 69 ರನ್ ಸೇರಿಸಿದರು. ಅಗರವಾಲ್ ತನ್ನ ನಾಲ್ಕನೇ ಟೆಸ್ಟ್‌ನಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. 55 ರನ್ ಗಳಿಸಿದ ಅಗರವಾಲ್ ಅವರು ಹೋಲ್ಡರ್ ಎಸೆತದಲ್ಲಿ ಕಾರ್ನ್‌ವಾಲ್‌ಗೆ ಕ್ಯಾಚ್ ನೀಡಿದರು. 4ನೇ ವಿಕೆಟ್‌ಗೆ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಜೊತೆಯಾಗಿ 49 ರನ್ ಜಮೆ ಮಾಡಿದರು. ಕಳೆದ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ (81) ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ (102) ದಾಖಲಿಸಿದ್ದ ರಹಾನೆ ಅವರು 24 ರನ್ ಗಳಿಸಿ ಕ್ಯಾಮರೊನ್ ರೋಚ್‌ಗೆ ವಿಕೆಟ್ ಒಪ್ಪಿಸಿದರು.
59.5 ಓವರ್‌ಗಳಲ್ಲಿ 164ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಲು ನಾಯಕ ಕೊಹ್ಲಿಗೆ ಹನುಮ ವಿಹಾರಿ ಜೊತೆಯಾದರು. ಇವರು ಜೊತೆಯಾಗಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದರು. ನಾಯಕ ಕೊಹ್ಲಿ 22ನೇ ಅರ್ಧಶತಕ ದಾಖಲಿಸಿದರು. ಕೊಹ್ಲಿ ಶತಕದ ಯೋಜನೆಯಲ್ಲಿದ್ದರು. ಆದರೆ ಹೋಲ್ಡರ್ ಇದಕ್ಕೆ ಅವಕಾಶ ನೀಡಲಿಲ್ಲ. ಹ್ಯಾಮಿಲ್ಟನ್‌ಗೆ ಕ್ಯಾಚ್ ನೀಡಿದರು. ಕೊಹ್ಲಿ 76 ರನ್(163ಎ, 10ಬೌ) ಗಳಿಸಿ ನಿರ್ಗಮಿಸಿದರು. 6ನೇ ವಿಕೆಟ್‌ಗೆ ಹನುಮ ವಿಹಾರಿ ಮತ್ತು ರಿಷಭ್ ಪಂತ್ ಜೊತೆಯಾಗಿ ಮುರಿಯದ ಜೊತೆಯಾಟದಲ್ಲಿ 62 ಜಮೆ ಮಾಡಿ ಬ್ಯಾಟಿಂಗ್‌ನ್ನು ಎರಡನೇ ದಿನಕ್ಕೆ ಕಾಯ್ದಿರಿಸಿದರು. ವಿಂಡೀಸ್ ನಾಯಕ ಜೇಸನ್ ಹೋಲ್ಡರ್ 39ಕ್ಕೆ 3 ವಿಕೆಟ್ ಪಡೆದರು. ಕೇಮರ್ ರೋಚ್ ಮತ್ತು ರಹಕೀಮ್ ಕಾರ್ನ್‌ವಾಲ್ ತಲಾ 1 ವಿಕೆಟ್ ಹಂಚಿಕೊಂಡರು.







