4 ಸಾವಿರ ಪೌರಕಾರ್ಮಿಕರ ಹುದ್ದೆ; ಅರ್ಜಿ ಆಹ್ವಾನ
ಬೆಂಗಳೂರು, ಸೆ.1: 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು (ಡಿ ಗುಂಪು) ಭರ್ತಿ ಮಾಡಲು ಬಿಬಿಎಂಪಿ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು 4 ಸಾವಿರ ಹುದ್ದೆಗಳಲ್ಲಿ 3,510 ಹುದ್ದೆಗಳನ್ನು ಸ್ಥಳೀಯ ಮೂಲವೃಂದದ ಮೂಲಕ ತುಂಬಲಾಗುತ್ತಿದೆ. 490 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ವೃಂದಕ್ಕೆ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆ.9ರಿಂದ ಆರಂಭವಾಗಲಿದ್ದು, ಅ.9 ಕೊನೆಯ ದಿನವಾಗಿದೆ.ಅಭ್ಯರ್ಥಿಗಳ ವಯಸ್ಸು 45 ವರ್ಷಗಳ ಒಳಗಿರಬೇಕು. ಬಿಬಿಎಂಪಿಯಲ್ಲಿ ಎರಡು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಎನ್.ಎಂ.ಆರ್, ದಿನಗೂಲಿ ಅಥವಾ ಹೊರಗುತ್ತಿಗೆ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ.
ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇದ್ದು, ಪೌರಕಾರ್ಮಿಕರು 100 ಹಾಗೂ ಇತರರು 200 ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





