ಶೀಘ್ರವೇ ಹೆಣ್ಣುಕರುಗಳು ಮಾತ್ರ ಜನಿಸಲಿವೆ ಎಂದ ಕೇಂದ್ರ ಸಚಿವ ಗಿರಿರಾಜ ಸಿಂಗ್

ಹೊಸದಿಲ್ಲಿ,ಸೆ.1: ರೈತರ ಆದಾಯವನ್ನು ಹೆಚ್ಚಿಸಲು ಹೆಚ್ಚು ಹೆಣ್ಣುಕರುಗಳು ಜನಿಸುವಂತೆ ಮಾಡಲು ‘ಲಿಂಗ ವಿಂಗಡಿತ ವೀರ್ಯ ’ ತಂತ್ರಜ್ಞಾನವನ್ನು ತರಲು ಸರಕಾರವು ಯೋಜಿಸಿದೆ ಎಂದು ಕೇಂದ್ರ ಪಶು ಸಂಗೋಪನೆ ಸಚಿವ ಗಿರಿರಾಜ ಸಿಂಗ್ ಅವರು ಹೇಳಿದ್ದಾರೆ.
ಶನಿವಾರ ಹೈನು ಉತ್ಪನ್ನವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,‘2019-2020ನೇ ಸಾಲಿಗೆ 30 ಲಕ್ಷ ಡೋಸ್ ಲಿಂಗ ವಿಂಗಡಿತ ವೀರ್ಯವನ್ನು ವಿತರಿಸಲಾಗುವುದು, 2025ರ ವೇಳೆಗೆ ಇದು 10 ಕೋಟಿ ಡೋಸ್ಗೆ ತಲುಪಲಿದ್ದು,ಗೋವುಗಳ ಸಂಖ್ಯೆ ಸುಮಾರು 10 ಕೋಟಿಗಳಷ್ಟು ಹೆಚ್ಚಲಿದೆ. ಇದು ಒಂದು ರೀತಿಯಲ್ಲಿ ಫ್ಯಾಕ್ಟರಿಯಲ್ಲಿ ಗೋವುಗಳನ್ನು ಉತ್ಪಾದಿಸಿದಂತೆ. ನಾವು ಗೋವು ಫ್ಯಾಕ್ಟರಿಯೊಂದನ್ನು ನಿರ್ಮಿಸುತ್ತೇವೆ ’ಎಂದರು.
‘ಹಾಲು ಕೊಡುವುದನ್ನು ನಿಲ್ಲಿಸಿರುವ ಗೋವುಗಳು ‘ಐವಿ ಎಂಬ್ರಿಯೊ ಅಡ್ವಾನ್ಸಡ್ ’ ತಂತ್ರಜ್ಞಾನದ ಮೂಲಕ ಮತ್ತೆ ದಿನಕ್ಕೆ 20 ಲೀ.ಹಾಲು ನೀಡುವಂತೆ ಮಾಡಲಾಗುವುದು.ಇಂತಹ ತಂತ್ರಜ್ಞಾನವು ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ. ನಾವು ಕ್ರಾಂತಿಯೊಂದನ್ನು ತರಲಿದ್ದೇವೆ ’ ಎಂದೂ ಸಚಿವರು ತಿಳಿಸಿದರು.
ಉತ್ತರಾಖಂಡವು ಕಳೆದ ಮಾರ್ಚ್ನಲ್ಲಿ ಲಿಂಗ ವಿಂಗಡಿತ ವೀರ್ಯವನ್ನು ಉತ್ಪ್ಪಾದಿಸಿದ ದೇಶದ ಮೊದಲ ರಾಜ್ಯವಾಗಿದ್ದು,ಇದು ಹೆಣ್ಣುಕರುವಿನ ಜನನ ಸಾಧ್ಯತೆಯನ್ನು ಶೇ.90ರಷ್ಟು ಹೆಚ್ಚಿಸುತ್ತದೆ.