Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬ್ಯಾಂಕ್ ವಿಲೀನ ಪ್ರಧಾನಿ ಮೋದಿಯ ಆತುರದ...

ಬ್ಯಾಂಕ್ ವಿಲೀನ ಪ್ರಧಾನಿ ಮೋದಿಯ ಆತುರದ ನಿರ್ಧಾರ: ವೀರಪ್ಪ ಮೊಯ್ಲಿ

ವಾರ್ತಾಭಾರತಿವಾರ್ತಾಭಾರತಿ1 Sept 2019 8:57 PM IST
share
ಬ್ಯಾಂಕ್ ವಿಲೀನ ಪ್ರಧಾನಿ ಮೋದಿಯ ಆತುರದ ನಿರ್ಧಾರ: ವೀರಪ್ಪ ಮೊಯ್ಲಿ

ಉಡುಪಿ, ಸೆ.1: ಕೇಂದ್ರ ಸರಕಾರ ನಿನ್ನೆ ಪ್ರಕಟಿಸಿದ ದೇಶದ ಪ್ರಮುಖ ಬ್ಯಾಂಕ್‌ಗಳ ವಿಲೀನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತುರದ ದುಡುಕಿದ ನಿರ್ಧಾರ. ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಿಲ್ಲ. ಬ್ಯಾಂಕ್ ಅಧ್ಯಕ್ಷರುಗಳ ಜೊತೆಗೂ ಚರ್ಚೆಯಾಗಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಉಡುಪಿಯ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೋದಿ ಅವರು ರಾತ್ರಿ ನಿರ್ಧಾರ ಮಾಡುತ್ತಾರೆ. ಬೆಳಗ್ಗೆ ಅದನ್ನು ಘೋಷಣೆ ಮಾಡುತ್ತಾರೆ. ಕಾಶ್ಮೀರ ವಿಚಾರದಲ್ಲೂ ಪ್ರಧಾನಿ ಆತುರದ ನಿರ್ಧಾರ ಪ್ರಕಟಿಸಿದ್ದಾರೆ ಎಂದವರು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳ ತವರು. ಮೊದಲು ವಿಜಯಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನಗೊ ಳಿಸಲಾಯಿತು. ಈಗ ಕಾರ್ಪೋರೇಷನ್, ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್‌ಗಳ ಸರದಿ. ಈ ಬ್ಯಾಂಕ್ ವಿಲೀನದ ಸಾಧಕ-ಬಾಧಕಗಳ ಚರ್ಚೆ ನಡೆಸದೇ, ಸಂಸತ್ತಿನಲ್ಲಾಗಲೀ, ವಿಪಕ್ಷ ನಾಯಕರೊಂದಿಗಾಗಲೀ ಚರ್ಚಿಸದೇ ಇವುಗಳ ವಿಲೀನ ಪ್ರಕಟಿಸಿದೆ. ಈ ಮೂಲಕ ಎರಡು ಜಿಲ್ಲೆಗಳಿಗೆ ಹಾಗೂ ಇಲ್ಲಿನ ಮುತ್ಸದಿಗಳಿಗೆ ಕೇಂದ್ರ ಅಪಮಾನ ಮಾಡಿದೆ ಎಂದು ಆರೋಪಿಸಿದರು.

ಈ ಎಲ್ಲಾ ಬ್ಯಾಂಕುಗಳಿಗೆ ಅದರದ್ದೇ ಆದ ಅಸ್ಮಿತೆ ಇದೆ. ಬಡಜನರಿಗೆ ಸೇವೆ ಕೊಡುವ ಉದ್ದೇಶದಿಂದಲೇ ಈ ಎಲ್ಲಾ ಬ್ಯಾಂಕುಗಳು ಜನ್ಮ ತಾಳಿವೆ. ಈಗ ಅವುಗಳನ್ನು ಜನರಿಂದ ದೂರ ಮಾಡಲಾಗುತ್ತಿದೆ. ವಿಲೀನದ ಮೂಲಕ ದೊಡ್ಡ ಬ್ಯಾಂಕ್ ಮಾಡುತ್ತೇವೆ ಎನ್ನುತ್ತಾರೆ. ಆದರೆ ದೊಡ್ಡ ಬ್ಯಾಂಕುಗಳ ಎಂದೂ ಹಳ್ಳಿಗಳಿಗೆ ಹೋಗುವುದಿಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲ ನೀಡಲು ದೊಡ್ಡ ಬ್ಯಾಂಕ್ ಮಾಡಿದ್ದಾರೆ. ಮುಂದೆ ಇವುಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ವಿದೇಶಿ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುತ್ತಾರೆ ಎಂದು ಭವಿಷ್ಯ ನುಡಿದರು.

ಅಘೋಷಿತ ಆರ್ಥಿಕ ತುರ್ತುಸ್ಥಿತಿ: ರಿಸರ್ವ್ ಬ್ಯಾಂಕ್ ಎಂಬುದು ದೇಶದ ಆರ್ಥಿಕ ಬೆನ್ನೆಲುಬಾಗಿದೆ. ಮೋದಿ ಸರಕಾರ ಈಗ ಆರ್‌ಬಿಐನ ಮೀಸಲು ಹಣ ವರ್ಗಾಯಿಸಿಕೊಂಡಿದೆ. ದೇಶದಲ್ಲಿ ಆರ್ಥಿಕ ತುರ್ತುಪರಿ ಸ್ಥಿತಿ ಇದ್ದಾಗ ಮಾತ್ರ ಇಂಥ ಕ್ರಮ ಕೈಗೊಳ್ಳುತ್ತಾರೆ. ಈ ಮೂಲಕ ದೇಶದಲ್ಲೀಗ ಅಘೋಷಿತ ಆರ್ಥಿಕ ತುರ್ತು ಸ್ಥಿತಿಯನ್ನು ಸರಕಾರ ಜಾರಿಗೊಳಿಸಿದೆ ಎಂದವರು ಆಪಾದಿಸಿದರು.

ದೇಶದ ಜಿಡಿಪಿ ಇದೀಗ ಶೇ.5ಕ್ಕಿಂತ ಕೆಳಕ್ಕಿಳಿದಿದೆ. ಬ್ಯಾಂಕುಗಳಲ್ಲಿ ಅಕ್ರಮಗಳ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.78ರಷ್ಟು ಅಧಿಕಗೊಂಡಿದೆ. ಇತ್ತೀಚಿನ ಅತಿವೃಷ್ಠಿಯಿಂದ ರಾಜ್ಯದ 22 ಜಿಲ್ಲೆಗಳು ಬಾಧಿತವಾದರೂ, ಊರಿಗೆ ಊರೇ ಸರ್ವನಾಶವಾದರೂ ಈವರೆಗೆ ಕೇಂದ್ರ ಸರಕಾರ ರಾಜ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದೂ ಮೊಯ್ಲಿ ದೂರಿದರು.

ಈವರೆಗೆ ಅತಿವೃಷ್ಟಿಯಿಂದ ರಾಜ್ಯದಲ್ಲಿ 68 ಮಂದಿ ಸಾವನ್ನಪ್ಪಿದ್ದಾರೆ. ಐದು ಲಕ್ಷಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶವಾಗಿವೆ. ಕೊಡಗು, ಬೆಳ್ತಂಗಡಿಯಂಥ ಕಡೆಗಳಲ್ಲಿ ಗ್ರಾಮಕ್ಕೆ ಗ್ರಾಮವೇ ನಾಶವಾಗಿವೆ. ಇವುಗಳಿಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ. ಪ್ರವಾಹದಿಂದಾದ ನಷ್ಟ 50 ಸಾವಿರ ಕೋಟಿ ರೂ.ಗಳಲ್ಲ, ನಮ್ಮ ಅಂದಾಜಿನಂತೆ ಐದು ಲಕ್ಷ ಕೋಟಿ ರೂ.ಗಳಾಗಿವೆ ಎಂದರು.

ರಾಜ್ಯ ಸರಕಾರ ತುರ್ತು ಪರಿಹಾರಕ್ಕಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಬದಲು ಪ್ರಧಾನಿ ರಾಜ್ಯಕ್ಕೆ ಬರುವುದನ್ನು ಎದುರು ನೋಡುತ್ತಿದೆ. ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ಅಂದಿನ ಪ್ರಧಾನಿ ಡಾ.ಸಿಂಗ್ ಅವರು ಬಂದು ಸ್ಥಳದಲ್ಲೇ 10ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದರು ಎಂದು ಮೊಯ್ಲಿ ನೆನಪಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಐಎಎಸ್ ಅಧಿಕಾರಿಗಳ ನಿಯೋಗ ಬರುವುದು ವ್ಯರ್ಥ. ಅದಕ್ಕೆ ಬದಲು ತಜ್ಞರ ಸಮಿತಿಯನ್ನು ಸಮೀಕ್ಷೆಗೆ ಕಳುಹಿಸಬೇಕು. ಅವರು ನಷ್ಟದ ಸರಿಯಾದ ಅಂದಾಜು ಮಾಡಬೇಕು. ಇದಕ್ಕಾಗಿ ಪ್ರಧಾನಿಗಳನ್ನು ಕಾಯುತ್ತಾ ಕೂರಬಾರದು.ರಾಷ್ಟ್ರೀಯ ವಿಪತ್ತು ಸಮಿತಿಯ ಅಧ್ಯಕ್ಷರಾದ ಗೃಹಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಂದು ನೋಡಿದ್ದಾರೆ. ಆದರೂ ಯಾಕೆ ಪರಿಹಾರ ಘೋಷಿಸುತ್ತಿಲ್ಲ. ಕೇಂದ್ರ, ರಾಜ್ಯದ ವಿಪತ್ತನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ವಿರೋಧ ಪಕ್ಷಗಳು ವಿಫಲ:  ಆಡಳಿತ ಬಿಜೆಪಿ ಪಕ್ಷಕ್ಕೆ ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ವಿಫಲವಾಗಿವೆ ಎಂಬುದನ್ನು ಮೊಯ್ಲಿ ಒಪ್ಪಿಕೊಂಡರು. ವಿರೋಧ ಪಕ್ಷಗಳು ಬಲಿಷ್ಠವಾಗಿಲ್ಲ ಎಂದು ಕೇಂದ್ರ ಸರಕಾರ ಹೀಗೆಲ್ಲಾ ಮಾಡುತ್ತಿದೆ. ಆದರೆ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ-ಅಮಿತ್‌ಶಾ ಜೋಡಿಯ ಈ ಧೋರಣೆ ಮಾರಕ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ದೇಶದ ಈಗಿನ ಆರ್ಥಿಕ ಪರಿಸ್ಥಿತಿಯೂ ಸೇರಿದಂತೆ ವಿವಿಧ ಸ್ಥಿತಿ-ಗತಿಯ ಬಗ್ಗೆ, ಅದರ ವೈಫಲ್ಯಗಳ ಬಗ್ಗೆ ಜನರಿಗೆ ಮನದಟ್ಟು ಮಾಡಲು ಪ್ರತಿಪಕ್ಷಗಳು ಮುಂದಾಗಬೇಕು. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮೊದಲು ಎಚ್ಚೆತ್ತು ಕೊಳ್ಳಬೇಕು. ಸಕ್ರೀಯ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಮುಂದಾಗಬೇಕು. ಇದು ಕಾಂಗ್ರೆಸ್‌ನ ರಾಷ್ಟ್ರೀಯ ಕರ್ತವ್ಯವೂ ಹೌದು ಎಂದವರು ಒಪ್ಪಿಕೊಂಡರು.

ವಿವಿಧ ಏಜೆನ್ಸಿಗಳ ಮೂಲಕ ಪ್ರತಿಪಕ್ಷ ನಾಯಕರನ್ನು ಹೆದರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಸಿ.ಚಿದಂಬರಂ, ಈಗ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ., ಸಿಬಿಐ ಮೂಲಕ ಹೆದರಿಸಿ ಬೆದರಿಸಲಾಗುತ್ತಿದೆ. ಆದರೆ ಪ್ರಜಾಪ್ರಭುತ್ವದ ರಕ್ಷಣೆಗೆ ಕಾಂಗ್ರೆಸ್ ಹಿಂಜರಿಯಬಾರದು ಎಂದವರು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಡಿಸಿಸಿ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ನಾಯಕರಾದ ಯು.ಆರ್.ಸಭಾಪತಿ, ಎಂ.ಎ.ಗಫೂರ್, ಭಾಸ್ಕರ ರಾವ್ ಕಿದಿಯೂರು, ನಾಗೇಶ್‌ಕುಮಾರ್ ಉದ್ಯಾವ, ಹರ್ಷ ಮೊಯ್ಲಿ ಉಪಸ್ಥಿತರಿದ್ದರು.

ಆತ್ಮಕತೆ, ಕಾದಂಬರಿ ರಚನೆಯಲ್ಲಿ ಮೊಯ್ಲಿ

ರಾಜ್ಯದ ಹಿರಿಯ ಅನುಭವಿ ರಾಜಕಾರಣಿಯಾಗಿರುವಂತೆ ಎಂ.ವೀರಪ್ಪ ಮೊಯ್ಲಿ ಅವರು ಹಲವು ಕತೆ, ಕಾದಂಬರಿ, ಮಹಾಕಾವ್ಯ ಗಳನ್ನು ರಚಿಸಿದ ಸಾಹಿತಿಯೂ ಹೌದು. ಈಗ ಅವರು ಒಂದು ಸಾಮಾಜಿಕ ಕಾದಂಬರಿ ಹಾಗೂ ತನ್ನ ಆತ್ಮಕತೆಯನ್ನು ಬರೆಯುವು ದರಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.

ತನ್ನ ಆತ್ಮಕತೆ ಹುಟ್ಟಿನಿಂದ, ಇಂದಿನವರೆಗೂ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. 500ರಿಂದ 600 ಪುಟಗಳಷ್ಟಾಗುವ ಈ ಆತ್ಮಕತೆ ಅಂತಿಮ ಹಂತದಲ್ಲಿದ್ದು ಮುಂದಿನ ಜನವರಿ ವೇಳೆಗೆ ಬಿಡುಗಡೆಗೆ ಸಿದ್ಧಗೊಳ್ಳಲಿದೆ. ತನ್ನ ರಾಜಕೀಯ ಹಾಗೂ ಸಾಮಾಜಿಕ ಜೀವನದ ಪ್ರತಿಯೊಂದು ವಿಷಯವನ್ನು ಪ್ರಾಮಾಣಿಕವಾಗಿ ಬಿಚ್ಚಿಟ್ಟಿದ್ದು, ವಿವಾದಗಳಾವುದೊ ಎಂಬುದು ತನಗೆ ಗೊತ್ತಿಲ್ಲ. ಆದರೆ ಸತ್ಯಸಂಗತಿಯನ್ನಷ್ಟೇ ನಾನು ಬರೆದಿದ್ದೇನೆ, ವಿವರವನ್ನು ಕಾದು ನೋಡಿ ಎಂದರು.

ಬರೆಯುತ್ತಿರುವ ಹೊಸ ಕಾದಂಬರಿ ಕುರಿತು ಯಾವುದೇ ಮಾಹಿತಿ ಹಂಚಿ ಕೊಳ್ಳಲು ನಿರಾಕರಿಸಿದ ಮೊಯ್ಲಿ ಅದು ಸಾಮಾಜಿಕ-ಜೈವಿಕ ಕಾದಂಬರಿ ಯಾಗಿದ್ದು, ಅದರ ಶೀರ್ಘಿಕೆಯನ್ನು ನಿರ್ಧರಿಸಿರುವುದಾಗಿ ಹೇಳಿ, ಗುಟ್ಟು ಬಿಟ್ಟುಕೊಡಲು ನಿರಾಕರಿಸಿದರು.

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಲ್ಲಿಲ್ಲ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸದಸ್ಯತ್ವದ ಕುರಿತಂತೆ ಮೊಯ್ಲಿ ಅವರನ್ನು ಪ್ರಶ್ನಿಸಿದಾಗ, ಅವರೀಗ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಜೆಡಿಎಸ್ ಪಕ್ಷದಲ್ಲಿರಬೇಕು. ಮತ್ತೆ ಕಾಂಗ್ರೆಸ್‌ಗೆ ಬರಲು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದರು.

ಜೆಡಿಎಸ್ ಟಿಕೇಟ್‌ನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ದಾಗಲೇ ಅವರು ಕಾಂಗ್ರೆಸ್ ಬಿಟ್ಟಂತಾಯಿತು. ಮತ್ತೆ ಕಾಂಗ್ರೆಸ್‌ಗೆ ಬರಲು ಅವರು ಹೊಸದಾಗಿ ಅರ್ಜಿ ಹಾಕಿಕೊಳ್ಳಬೇಕು. ಅವರೀಗ ಯಾವ ಪಕ್ಷದಲ್ಲಿದ್ದಾರೆ ಎಂಬ ಬಗ್ಗೆ ಪ್ರಮೋದ್‌ರನ್ನೇ ಕೇಳಿ ತಿಳಿದುಕೊಳ್ಳಿ ಎಂದರು.

ಎತ್ತಿನಹೊಳೆ ತಜ್ಞರಿಂದ ತನಿಖೆಯಾಗಲಿ

ಎತ್ತಿನಹೊಳೆಯಂಥ ಪರಿಸರಕ್ಕೆ ಮಾರಕವಾದ ಯೋಜನೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ತೀವ್ರ ಭೂಕುಸಿತ ಉಂಟಾಗುತ್ತಿದೆ ಎಂಬ ಪರಿಸರವಾದಿಗಳ ಆರೋಪಗಳ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ತಜ್ಞರ ಸಮಿತಿಯಿಂದ ತನಿಖೆಯಾಗಿ ಸತ್ಯ ಸಂಗತಿ ಹೊರಬರಲಿ ಎಂದು ಮೊಯ್ಲಿ ಹೇಳಿದರು.

ಪರಿಸರ ತಜ್ಞರ ಅಭಿಪ್ರಾಯಗಳನ್ನು ಪಡೆದೇ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದೇನೂ ನೇತ್ರಾವತಿ ತಿರುವು ಯೋಜನೆಯಲ್ಲ. ಈ ಬಗ್ಗೆ ಅನಗತ್ಯ ವಿವಾದ ಮಾಡಲಾಗಿದೆ. ಆರೋಪಗಳ ಕುರಿತು ತಜ್ಞರಿಂದ ಉನ್ನತ ಮಟ್ಟದ ತನಿಖೆಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X