ಗಣೇಶ ಚತುರ್ಥಿ ಪ್ರಯುಕ್ತ ಮರಳ ಶಿಲ್ಪ ಕಲಾಕೃತಿ

ಮಲ್ಪೆ, ಸೆ.1: ಗಣೇಶ ಚತುರ್ಥಿಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದ ಕಲಾವಿದರು ರವಿವಾರ ಮಲ್ಪೆ ಬೀಚ್‌ನಲ್ಲಿ ಮರಳ ಶಿಲ್ಪ ಕಲಾಕೃತಿಯನ್ನು ರಚಿಸಿದರು.
ಕೇಂದ್ರದ ಮಾರ್ಗದರ್ಶಕ ಹಾಗೂ ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ಕಲಾವಿದರಾದ ಡಾ.ಜಿ.ಎಸ್.ಕೆ.ಭಟ್, ಅನುಷ ಆಚಾರ್ಯ, ಕೆರೋಲಿನ್, ರಾಘವೇಂದ್ರ, ಗುರುಪ್ರಸಾದ್, ಜೈ ನೇರಳಕಟ್ಟೆ, ಸಂತೋಷ್ ಭಟ್, ಯಶಾ ಜಿ., ಪ್ರಸಾದ್ ಆರ್., ಸಾತ್ವಿಕ್ ಇದರಲ್ಲಿ ಪಾಲ್ಗೊಂಡಿದ್ದರು.
Next Story





