ಗಣೇಶ ಚತುರ್ಥಿಗೆ ಮಳೆಯ ಭೀತಿ: ಮಳೆಯ ನಡುವೆ ಹೂವಿನ ವ್ಯಾಪಾರ

ಮಂಗಳೂರು, ಸೆ.1: ಈ ಬಾರಿ ಚೌತಿ ಹಬ್ಬಕ್ಕೆ ಮಳೆ ಅಡ್ಡಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಸೆ.5ರವರೆಗೆ ಕರಾವಳಿ ಮತ್ತು ಒಳನಾಡಿನಲ್ಲಿ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಸೂಚನೆ ನೀಡಿದೆ.
ರವಿವಾರ ಮುಂಜಾನೆಯಿಂದಲೇ ಮೋಡಕವಿದ ವಾತಾವರಣ ಮತ್ತು ಅಲ್ಪ ಬಿಡುವಿನ ನಡುವೆ ಕರಾವಳಿಯಾದ್ಯಂತ ಮಳೆ ಸುರಿಯುತ್ತಿದ್ದರೂ ನಿರಂತರ ಮಳೆಯಾಗದೆ ಇದ್ದ ಕಾರಣ ಬಿಡುವಿನ ನಡುವೆ ಚೌತಿ ಹಬ್ಬಕ್ಕಾಗಿ ಹಣ್ಣು, ಹೂ, ತರಕಾರಿಗಾಗಿ ಜನರು ರವಿವಾರ ಸಂಜೆ ವೇಳೆ ನಗರದಲ್ಲಿ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂತು.
ಹೂವಿನ ವ್ಯಾಪಾರಿಗಳಿಗೆ ಚಿಂತೆ
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿವರ್ಷ ಅಷ್ಟಮಿ, ಚೌತಿ, ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ಉತ್ತರ ಕನ್ನಡದ ಹೂವಿನ ವ್ಯಾಪಾರಿಗಳು ಬಂದು ವ್ಯಾಪಾರ ಮಾಡುತ್ತಾರೆ. ಆದರೆ ಈ ಬಾರಿ ನೆರೆಯ ಜೊತೆ ಹೂವಿನ ವ್ಯಾಪಾರಕ್ಕೆ ಬಂದರೆ ಸುರಿಯುತ್ತಿರುವ ಮಳೆ ಆವರ ವ್ಯಾಪಾರಕ್ಕೆ ಅಡಚಣೆಯಾಗಿದೆ ಆದರೂ ಮಳೆಯ ನಡುವೆಯೂ ಹೂವಿನ ವ್ಯಾಪಾರದ ನಗರದ ಸ್ಟೇಟ್ ಬ್ಯಾಂಕ್, ಲೇಡಿ ಗೋಶನ್, ಪುರಭವನದ ಹತ್ತಿರ, ರಥಬೀದಿ, ಕದ್ರಿ, ಮಂಗಳಾದೇವಿ, ಕಂಕನಾಡಿ ಕೇಂದ್ರ ಮಾರುಕಟ್ಟೆಯ ಆವರಣದಲ್ಲಿ ಹೂವಿನ ವ್ಯಾಪಾರಿಗಳು ದೊಡ್ಡ ನಗರಕ್ಕೆ ಆಗಮಿಸಿದೆ.
ರವಿವಾರ ಸಂಜೆಯ ವೇಳೆ ಮಳೆ ಸ್ವಲ್ಪ ವಿರಾಮ ನೀಡಿರುವುದು ವ್ಯಾಪಾರಿಗಳ ಮುಖದಲ್ಲಿ ಹರ್ಷ ಕಂಡು ಬಂತು. ಹಾಸನ ಅರಕಲ ಗೋಡು ತಾಲೂಕಿನಿಂದ ಬಂದ ಹೂ ವಿನ ವ್ಯಾಪಾರಿ ಮಲ್ಲೇಶ ಕಳೆದ ಎಂಟು ವರ್ಷ ಗಳಿಂದ ಮಂಗಳೂರಿಗೆ ಬಂದು ಹುವಿನ ವ್ಯಾಪಾರ ಮಾಡ್ತಾರೆ ಅವರ ಪ್ರಕಾರ ‘‘ ಹಿಂದೆ ಮಳೆ ಬಾರದೆ ನಮ್ಮ ಬೆಳೆ ಹೋಗಿತ್ತು ಈ ಬಾರಿ ಮಳೆ ಹೊಯ್ದು ನಮ್ಮ ಬೆಳೆ ನಾಸಾಯ್ತು ಹೂವಿನ ಬೆಳೆನೂ ಹೋಗಿದೆ. ಇದ್ದ ಹೂವಿನ ವ್ಯಾಪಾರ ಮಾಡ್‌ಬೆಕೆಲ್ಲಾ ಸ್ವಾಮಿ ಹಾಗೆ ಹಬ್ಬಕ್ಕೆ ಬರ್ತೇವೆ. ಎಂಟು ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಹೂವ ತರ್ತೇವೆ. ಮಾರಿ ಹೋದ್ರೆ ಅಷ್ಟಾದ್ರೂ ಸಿಗುತ್ತೇ ...’’ಎನ್ನುತ್ತಾರೆ.
ಹಾಸನದ ವ್ಯಾಪಾರಿ ನವೀನ್ ಹೇಳುವ ಪ್ರಕಾರ ‘‘ (ರವಿವಾರ)ವ್ಯಾಪಾರ ಚೆನ್ನಾಗಿದೆ. ಕೆಲವರು ರೇಟು ಜಾಸ್ತಿಯಾಯಿತು ಎನ್ನುತ್ತಾರೆ. ಮಳೆ ಬಿಟ್ರೆ ನಮ್ಮ ಪುಣ್ಯ ಎನ್ನುತ್ತಾರೆ’’. ಮಳೆಯ ನಡುವೆಯೇ ಹೂವಿನ ವ್ಯಾಪಾರಿಗಳು ಹೂವಿನ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂತು. ಸೇವಂತಿಗೆ ಮಾರಿಗೆ 70ರಿಂದ 80 ರೂ., ಜೀನಿಯ 60ರಿಂದ 70 ರೂ., ಮಲ್ಲಿಗೆ ಅಟ್ಟಿಗೆ 570ರೂಗಳಿಗೆ ಮಾರಟವಾಗುತ್ತಿತ್ತು.
ನಗರದ ಬೃಹತ್ ಮಾಲ್‌ಗಳಲ್ಲಿಯೂ ಹೂ ,ಸ್ಥಳೀಯ ತರಕಾರಿಗಳ ಮಾರಾಟವಾಗುತ್ತಿತ್ತು
ನಗರದ ಬೃಹತ್ ಮಾಲ್‌ನ ಸ್ಪಾರ್, ಮೋರ್‌ನ ಮಳಿಗೆಯಲ್ಲಿ ಸೇವಂತಿಗೆ, ಗುಲಾಬಿ ಹೂ, ಸ್ಥಳೀಯ ತರಕಾರಿಗಳಾದ ಬೆಂಡೆ, ನುಗ್ಗೆ ಕಾಯಿ ಮಾರಾಟವಾಗುತ್ತಿತ್ತು. ಮೋರ್‌ನ ಮಳಿಗೆಗಳಲ್ಲಿ ಕಬ್ಬಿನ ಜಲ್ಲೆಯನ್ನು ತುಂಡೊಂದಕ್ಕೆ 35 ರೂಪಾಯಿಯಂತೆ ಮಾರಾಟ ಮಾಡುತ್ತಿರುವುದು ಕಂಡು ಬಂತು. ಸೆಂಟ್ರಲ್ ಮಾರ್ಕೆಟ್ ರಸ್ತೆಯಲ್ಲಿ ರವಿವಾರ ಜನಜಂಗುಳಿ ತರಕಾರಿ ಖರೀದಿಗೆ ಮುಗಿಬಿದ್ದಿತ್ತು. ಊರಿನ ತರಕಾರಿಗಳ ದರ ಹಿಂದಿರ ದರದ ಮೂರು ಪಟ್ಟು ಏರಿಕೆಯಾಗಿತ್ತು. ಬೆಂಡೆ, ಹಾಗಲ ಕಾಯಿ, ಅಂಬಟೆಕಾಯಿ, ನುಗ್ಗೆ ಸೊಪ್ಪು, ಹರಿವೆ, ಶುಂಠಿ ಗಿಡಗಳಿಗೆ ಬೇಡಿಕೆ ಇತ್ತು. ಒಂದು ಶುಂಠಿ ಗಿಡಕ್ಕೆ 18ರಿಂದ 20ರೂ.ಗೆ ಮಾರಾಟವಾಗುತ್ತಿತ್ತು. ಊರಿನ ಬೆಂಡೆಕಾಯಿಗೆ 190, ಹೈಬ್ರೀಡ್ ಬೆಂಡೆ 70 ರೂ.ಗೆ ಮಾರಾಟವಾಗುತ್ತಿತ್ತು.







