ಎರಡನೆ ಮಹಾಯುದ್ಧದ ನರಮೇಧ: ಪೊಲ್ಯಾಂಡ್‌ನ ಕ್ಷಮೆಯಾಚಿಸಿದ ಜರ್ಮನ್ ಅಧ್ಯಕ್ಷ

ವೈಲುನ್(ಪೊಲ್ಯಾಂಡ್),ಸೆ.1: ಜಗತ್ತಿನ ಇತಿಹಾಸದಲ್ಲೇ ಭೀಕರ ರಕ್ತಪಾತ ನಡೆದ ಎರಡನೆ ಮಹಾಯುದ್ಧಕ್ಕೆ ಕಾರಣವಾಗಿದ್ದಕ್ಕಾಗಿ ಜರ್ಮನಿಯನ್ನು ಕ್ಷಮಿಸಬೇಕೆಂದು ಜರ್ಮನ್ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೈನ್‌ಮಿಯರ್ ಅವರು ಪೊಲಂಡ್‌ನ್ನು ಕೋರಿದ್ದಾರೆ.
80 ವರ್ಷಗಳ ಹಿಂದೆ ನಡೆದ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಭೀಕರ ಬಾಂಬ್ ದಾಳಿಗೆ ಸಾಕ್ಷಿಯಾದ ಪೊಲ್ಯಾಂಡ್‌ನ ನಗರವಾದ ವೈಲುನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಟೈನ್‌ಮಿಯರ್ ಅವರು ಜರ್ಮನಿಯ ಕ್ಷಮೆಯಾಚಿಸಿದರು.
ದ್ವಿತೀಯ ಮಹಾಯುದ್ಧದಲ್ಲಿ ನಾಝಿಪಡೆಗಳು ನಡೆಸಿದ ಭೀಕರ ಆಕ್ರಮಣದಿಂದಾಗಿ ಪೊಲ್ಯಾಂಡ್ ದೇಶವು ವ್ಯಾಪಕವಾಗಿ ತತ್ತರಿಸಿತ್ತು. ಎರಡನೆ ಮಹಾಯುದ್ಧದಲ್ಲಿ 5 ಕೋಟಿಗೂ ಅಧಿಕ ಮಂದಿ ಪೊಲ್ಯಾಂಡ್ ಜನತೆ ಸಂಘರ್ಷದಲ್ಲಿ ಸಾವನ್ನಪ್ಪಿದರು.
ನಾಝಿ ಪಡೆಗಳ ನರಮೇಧಕ್ಕೆ ಬಲಿಯಾದ 60 ಲಕ್ಷ ಯಹೂದಿಗಳಲ್ಲಿ, ಸುಮಾರು ಅರ್ಧದಷ್ಟು ಮಂದಿ ಪೊಲ್ಯಾಂಡ್‌ನವರಾಗಿದ್ದಾರೆ. ‘‘ಪೊಲ್ಯಾಂಡ್‌ನ ಮಾನವಕುಲದ ವಿರುದ್ಧ ಅಪರಾಧಗಳನ್ನು ಎಸಗಿದವರು ಜರ್ಮನಿಯವರಾಗಿದ್ದರು. ಹಿಂದಿನ ಘಟನೆಗಳನ್ನು ಯಾರಾದರೂ ಸ್ಮರಿಸಿದಲ್ಲಿ ಅಥವಾ ಯುರೋಪ್‌ನಲ್ಲಿ ಜರ್ಮನಿಯ ರಾಷ್ಟ್ರೀಯ ಸಮಾಜವಾದಿ (ನಾಝಿ)ಗಳ ಭಯೋತ್ಪಾದನೆಯ ಬಗ್ಗೆ ಸಮರ್ಥಿಸಿಕೊಂಡಿದ್ದರೆ, ಆತ ಅಥವಾ ಆಕೆ ತನ್ನ ಬಗ್ಗೆಯೇ ತೀರ್ಪು ನೀಡಿದಂತೆ’’ ಎಂದು ಸ್ಟೈನ್‌ಮಿನಿಸ್ಟರ್ ಹೇಳಿದ್ದಾರೆ. ಜರ್ಮನಿಯ ಅಧ್ಯಕ್ಷನಾಗಿ ಎರಡನೆ ಮಹಾಯುದ್ಧದ ಕರಾಳತೆಯನ್ನು ನಾವು ಮರೆಯಲಾರೆವು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಸ್ಟೈನ್ ಮಿಯರ್ ಹೇಳಿದ್ದಾರೆ.
ನಾವು ಎರಡನೆ ಮಹಾಯುದ್ಧದ ಭೀಕರತೆಯನ್ನು ಸ್ಮರಿಸಿಕೊಳ್ಳುವೆಏವು ಹಾಗೂ ಇತಿಹಾಸವು ನಮ್ಮ ಮೇಲೆ ಹೊರಿಸಿರುವ ಜವಾಬ್ದಾರಿಯನ್ನು ನಾವು ಸಹಿಸಿಕೊಳ್ಳಲಿದ್ದೇವೆ ಎಂದವರು ಹೇಳಿದ್ದಾರೆ.







