ಹಳೆಕೋಟೆ: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೆಕೋಟೆ ಉಳ್ಳಾಲ ಇದರ ವತಿಯಿಂದ ರೂರಲ್ ಹೆಲ್ತ್‌ಕೇರ್ ಮತ್ತು ಡೆವಲಪ್‌ಮೆಂಟ್ ಸೆಂಟರ್ ಯೆನೆಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಳೆಕೋಟೆಯಲ್ಲಿ ರವಿವಾರ ನಡೆಯಿತು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಮಕ್ಕಳ ತಜ್ಞರು, ಮಹಿಳಾ ವಿಭಾಗ, ನೇತ್ರ ತಪಾಸಣೆ, ಚರ್ಮ ರೋಗ ವಿಭಾಗ ಹಾಗೂ ದಂತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. 257 ಮಂದಿ ಶಿಬಿರದ ಪ್ರಯೋಜನ ಪಡೆದರು. 31 ಮಂದಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.
ಶಿಬಿರದ ಉದ್ಘಾಟನೆಯನ್ನು ಹಳೆಕೋಟೆ ಮಸೀದಿಯ ಮುಹಝ್ಝಿಮ್ ಆದಂ ಮುಸ್ಲಿಯಾರ್ ದುವಾದೊಂದಿಗೆ ನೆರವೇರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಯು.ಎನ್ ಇಬ್ರಾಹಿಂ, ಯು.ಎಚ್. ಫಾರೂಕ್, ಮುಹಮ್ಮದ್ ಯು.ಬಿ., ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಅಧಿಕಾರಿ ಶ್ರೀನಿವಾಸ್, ದಂತ ವಿಭಾಗದ ಅಝೀಝ್, ಎಂಎಸ್ ಡಬ್ಲ್ಯೂ ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು.
ಯೇನೆಪೋಯ ಸಮಾಜ ಸೇವಾ ವಿಭಾಗದ ಅಬ್ದುಲ್ ರಝಾಕ್ ಅಬುದಾಭಿಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೆಡ್‌ಕ್ಯಾಮಲ್ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಚ್ ಇಸ್ಮಾಯಿಲ್ ಫಾರಿಸ್, ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕಲ್ಲಾಪು ಫೀಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಾಮಿಲ್ ರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮುಹಮ್ಮದ್ ಫೈರೋಝ್ ವಹಿಸಿದ್ದರು.
ಸಂಘದ ಸದಸ್ಯರಾದ ರಹೀಮ್ ಸಫ್ವಾನ್, ಮುಹಮ್ಮದ್, ಸಲೀಂ, ಇಕ್ಬಾಲ್, ಅಸ್ಪಾಕ್, ರಹ್ಮತ್, ಶರೀಫ್, ಇಮ್ರಾನ್, ಶಾಫಿ, ನಝೀರ್, ಹಕೀಮ್, ಫಾಝಿಲ್, ನೌಶಾದ್, ಮನ್ಸೂರ್, ಸತ್ತಾರ್ ಮೊದಲಾದವರು ಶಿಬಿರ ನಡೆಸಲು ಸಹಕರಿಸಿದರು.
ಅಬ್ದುಲ್ ರವೂಫ್, ಎಮ್ ಎಚ್ ಇಬ್ರಾಹಿಂ, ಅಬ್ದುಲ್ ಶಮೀರ್,ಲತೀಫ್, ಕರಿಮಾಕ ಶಿಬಿರಕ್ಕೆ ಆಗಮಿಸಿ ಶುಭ ಹಾರೈಸಿದರು ಅನಿವಾರ್ಯ ಕಾರಣದಿಂದ ಸಭೆಗೆ ಆಗಮಿಸಲು ಆಗದ ಕಾರಣ ಟೆಸ್ಟ್ ಸ್ಪೋರ್ಟ್ಸ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಫ್ವಾನ್ ಸ್ವಾಗತಿಸಿ, ಮುಹಮ್ಮದ್ ರಫೀಕ್ ಕಾರ್ಯವನ್ನು ನಿರೂಪಿಸಿದರು, ಮುಝಮ್ಮಿಲ್ ವಂದಿಸಿದರು.









