41 ಸಾವಿರಕ್ಕೂ ಅಧಿಕ ಜನರಿಂದ ರಾಜಭವನ ವೀಕ್ಷಣೆ
ಬೆಂಗಳೂರು, ಸೆ.1: ಸ್ವಾತಂತ್ರೋತ್ಸವದ ಅಂಗವಾಗಿ ರಾಜಭವನ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರ ಹಿನ್ನೆಲೆಯಲ್ಲಿ ಸರಿಸುಮಾರು 41 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿ ವೀಕ್ಷಿಸಿದ್ದಾರೆ.
ರಾಜಭವನ ವೀಕ್ಷಣೆಗೆ ಆ.17 ರಂದು ಅವಕಾಶ ನೀಡಲಾಗಿತ್ತು. ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ರಾಜಭವನವನ್ನು ಸಿಂಗಾರ ಮಾಡಲಾಗಿತ್ತು. ಬೆಂಗಳೂರು, ರಾಮನಗರ, ಮೈಸೂರು, ಬಳ್ಳಾರಿ, ಚಿತ್ರದುರ್ಗ, ಮಡಿಕೇರಿ, ಕನಕಪುರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಹೊರ ರಾಜ್ಯಗಳು ಸೇರಿದಂತೆ ಹೊರ ದೇಶಗಳಿಂಲೂ ಜನರು ಬಂದು ಭೇಟಿ ನೀಡಿದ್ದಾರೆ.
Next Story