ತುಮಕೂರು: ಹೆಚ್ಚುವರಿ ಎಸ್ಪಿ ಶೋಭಾರಾಣಿ ಅವರಿಗೆ ಬಿಳ್ಕೊಡುಗೆ ಕಾರ್ಯಕ್ರಮ

ತುಮಕೂರು :ಸೆ.1: ಪೊಲೀಸ್ ಇಲಾಖೆಯಲ್ಲಿ ಜನರ ಸೇವೆ ಮಾಡಲು ಕಾಲ ನಿಗಧಿ ಇಲ್ಲ. ದಿನದ 24 ಗಂಟೆ ಕೂಡ ಉತ್ತಮ ಸೇವೆ ಮಾಡಲು ಅವಕಾಶ ಇದೆ ಎಂದು ಬೆಂಗಳೂರಿಗೆ ವರ್ಗಾವಣೆಯಾದ ಹೆಚ್ಚುವರಿ ಎಸ್ಪಿ ಡಾ,ಶೋಭಾರಾಣಿ ಅಭಿಪ್ರಾಯಪಟ್ಟರು. ತುಮಕೂರಿನಲ್ಲಿ ನಡೆದ ಹೆಚ್ಚುವರಿ ಎಸ್ಪಿ ಶೋಭಾರಾಣಿ ಅವರಿಗೆ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಜನ ತುಂಬಾ ಸಹೃದಯವಂತರು. ನಾನು ವೈದ್ಯಕೀಯ ವೃತ್ತಿಯನ್ನ ಬಿಟ್ಟು ಬಂದೆ. ಅದೂ ಪೊಲೀಸ್ ಇಲಾಖೆಯಲ್ಲಿ ನನ್ನ ಸೇವೆಯನ್ನ ಮುಂದುವರಿಸಿದ್ದೇನೆ. ವೈದ್ಯರಾದ ಬಳಿಕ ಹೊರದೇಶದಲ್ಲಿ ಇರೋ ಯೋಚನೆ ಇತ್ತು. ಆದ್ರೆ ತಮ್ಮ ಅಜ್ಜಿಯಿಂದ ಇದೇ ದೇಶಲ್ಲಿ ಉಳಿಯುವಂತಾಯಿತು. ನಮ್ಮ ತಂದೆಗೆ ಪೊಲೀಸ್ ಇಲಾಖೆ ಇಷ್ಟ ಇರಲಿಲ್ಲಾ. ಆದ್ರೂ ನಾನು ಅವರೇ ಮೆಚ್ಚುವಂತ ಪೊಲೀಸ್ ಅಧಿಕಾರಿಯಾಗಿದ್ದಿನಿ. ಇದೆಲ್ಲಾ ನಮ್ಮ ಪೋಷಕರ ಆರ್ಶೀವಾದ ಎಂದರು.
ತುಮಕೂರು ಜಿಲ್ಲೆಯಲ್ಲಿ ಎರಡು ವರ್ಷ ಉತ್ತಮ ಕೆಲಸ ಮಾಡಿದ್ದೇನೆ. ಇದಕ್ಕೆ ಜನರ ಹಾಗೂ ಇಲಾಖೆ ಅಧಿಕಾರಗಳ ಸಹಕಾರ ಕೂಡ ಕಾರಣ. ಇರುವ ಹಾಗೂ ಭವಿಷ್ಯದ ಪೊಲೀಸ್ ಅಧಿಕಾರಿಗಳು ಯಾವುದೇ ಒತ್ತಡ. ಆಮಿಷಗಳಿಗೆ ಒಳಗಾಗದೆ ಕೆಲಸ ಮಾಡಬೇಕು. ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರಸ್ವಾಮೀ ಲಿಂಗೈಕ್ಯರಾದ ವೇಳೆ ಸಾರ್ವಜನಿಕರು, ಭಕ್ತಾದಿಗಳು ಪೊಲೀಸ್ ಇಲಾಖೆ ಜೊತೆ ಸಹಕರಿಸಿದನ್ನು ಸ್ಮರಿಸಿದರು. ಅಲ್ಲದೆ ವಿವಿಧ ಸಂದರ್ಭಗಳಲ್ಲಿ ಜನತೆ ನನಗೆ ತೋರಿದ ವಿಶ್ವಾಸ, ಪ್ರೀತಿಗೆ ನಾನೂ ಎಂದಿಗೂ ಆಭಾರಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ನೂತನ ಎಸ್ಪಿಸಿ ಉದೇಶ್ ಉಪಸ್ತಿತರಿದ್ದರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು , ಪಾಲ್ಗೊಂಡಿದ್ದರು.







