ಮಂಗಳೂರು: ಡ್ರಡ್ಜರ್ ಒಳಗೆ ನುಗ್ಗಿದ ನೀರು; 13 ಮಂದಿಯ ರಕ್ಷಣೆ

ಮಂಗಳೂರು: ಸಮುದ್ರದಲ್ಲಿ ತೀರದಲ್ಲಿ ಹೂಳು ತೆಗೆಯಲು ಬಂದಿದ್ದ ಡ್ರಡ್ಜರ್ ಒಳಗೆ ನೀರು ನುಗ್ಗಿದ ಪರಿಣಾಮ ಅಪಾಯದಲ್ಲಿದ್ದ 13 ಮಂದಿಯನ್ನು ರಕ್ಷಣೆ ಮಾಡಿದ ಘಟನೆ ರಾತ್ರಿ 2.30ಕ್ಕೆ ನಡೆದಿದೆ.
ಸಮುದ್ರ ತೀರದಲ್ಲಿ ಹೂಳು ತೆಗೆಯಲು ಬಂದಿದ್ದ ಡ್ರಡ್ಜರ್ ಒಳಗೆ ನೀರು ನುಗ್ಗಿದ ಪರಿಣಾಮ ಅದು ಅಪಾಯದ ಸ್ಥಿತಿಯಲ್ಲಿದ್ದು ಈ ಸಂದರ್ಭ ಅದರಲ್ಲಿದ್ದ 13 ಮಂದಿಯನ್ನು ಕೋಸ್ಟ್ ಗಾರ್ಡ್ ನ ಅಮರ್ತ್ಯ ರಕ್ಷಣಾ ಬೋಟ್ ರಕ್ಷಣೆ ಮಾಡಿದೆ.









