8 ಪ್ರಮುಖ ಕ್ಷೇತ್ರಗಳ ಬೆಳವಣಿಗೆಯಲ್ಲಿ ಭಾರೀ ಕುಸಿತ: ಕಳೆದ ಬಾರಿ 7.3 ಶೇ., ಈ ಬಾರಿ 2.1 ಶೇ.

ಹೊಸದಿಲ್ಲಿ, ಸೆ.2: ಎಂಟು ಪ್ರಮುಖ ಕ್ಷೇತ್ರಗಳ ಬೆಳವಣಿಗೆಯಲ್ಲಿ ಜುಲೈ ತಿಂಗಳಲ್ಲಿ ಭಾರೀ ಕುಸಿತ ಕಂಡಿದ್ದು, ಬೆಳವಣಿಗೆ ದರವು 2.1 ಶೇ.ಕ್ಕೆ ತಲುಪಿದೆ. ದೇಶದ ಮುಖ್ಯ ಕೈಗಾರಿಕಾ ಕ್ಷೇತ್ರಗಳಾದ ಕಲ್ಲಿದ್ದಲು, ಕಚ್ಛಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಗೊಬ್ಬರ ಉತ್ಪಾದನಾ ಕ್ಷೇತ್ರ, ಉಕ್ಕು ಉತ್ಪಾದನೆ, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರಗಳು ಭಾರೀ ಹಿನ್ನಡೆ ಅನುಭವಿಸಿದೆ.
ಸರಕಾರವು ಸೋಮವಾರ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ ಕಲ್ಲಿದ್ದಲಿನ ಉತ್ಪಾದನೆ, ಕಚ್ಛಾ ತೈಲ, ನೈಸರ್ಗಿಕ ಅನಿಲ ಕ್ಷೇತ್ರಗಳು ಜುಲೈ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯ ಬೆಳವಣಿಗೆ ದರ ಕ್ರಮವಾಗಿ 6.6 ಶೇ., 7.9 ಶೇ. ಮತ್ತು 4.2 ಶೇ.ಕ್ಕೆ ಕುಸಿದಿದೆ. ಇದಕ್ಕೂ ಮೊದಲಿನ ಅವಧಿಯಲ್ಲಿ ಈ ಕ್ಷೇತ್ರಗಳ ಬೆಳವಣಿಗೆಯ ದರ ಕ್ರಮವಾಗಿ 6.9, 11.2, 6.7 ಶೇ.ದಷ್ಟಿತ್ತು.
Next Story