ಕಕ್ಷೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ

ಹೊಸದಿಲ್ಲಿ, ಸೆ.2: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಚಂದಿರನ ಸಮೀಪ ತಲುಪಿದ್ದು, ಕಕ್ಷೆಯಿಂದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ.
ಈ ಬಗ್ಗೆ ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು , ಸೋಮವಾರ ಮಧ್ಯಾಹ್ನ 1:15ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರಯಾನ 2 ಆರ್ಬಿಟರ್ ನಿಂದ ಬೇರ್ಪಟ್ಟಿದೆ. ಸೆಪ್ಟೆಂಬರ್ 7 ರಂದು ಮಧ್ಯಾಹ್ನ 1:55 ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 3ರಂದು 3 ಸೆಕೆಂಡುಗಳ ಕಾಲ ಸಣ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಲ್ಯಾಂಡರ್ ನ ವ್ಯವಸ್ಥೆ ಯಾವ ರೀತಿ ಇದೆ ಎಂಬುದನ್ನು 24 ಗಂಟೆಗಳ ಕಾಲ ಪರಿಶೀಲಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.
ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಾಲ್ಕನೇ ರಾಷ್ಟ್ರವಾಗಿದೆ ಭಾರತ
Next Story





