ಜೀವನದಲ್ಲಿ ದೊರೆತ ಅವಕಾಶ ಸದುಪಯೋಗಪಡಿಸಿ: ರೊನಾಲ್ಡ್ ಗೋಮ್ಸ್

ಮಂಗಳೂರು: ಕೆನರಾ ಕಥೊಲಿಕ್ ಎಜುಕೇಷನ್ ಕಾರ್ಪರೇಟಿವ್ ಸೊಸೈಟಿಯ 75ನೇ ವಾರ್ಷಿಕ ಸಂದರ್ಭ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಅರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಣೆ ಕಾರ್ಯಕ್ರಮವು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಲಯನ್ಸ್ ಗವರ್ನರ್ ರೊನಾಲ್ಡ್ ಗೋಮ್ಸ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಾಗ ಮುಖಂಡತ್ವದ ಅವಕಾಶಗಳು ದೊರೆತಾಗ ಅದನ್ನು ಸದುಪಯೋಗ ಮಾಡಿಬೇಕು. ಯಾರೂ ತಾನು ಉಪಯೋಗಕ್ಕೆ ಇಲ್ಲ ಎಂಬ ಭಾವನೆ ನಿಮ್ಮಲ್ಲಿ ಹಾಗೂ ನಿಮ್ಮ ಹೆತ್ತವರಲ್ಲಿ ಎಂದಿಗೂ ಇರಕೂಡದು. ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಿದಾಗ ಅದರ ಉಪಯೋಗ ಜಗತ್ತಿಗೆ ತಿಳಿಯುತ್ತದೆ. ನಮ್ಮ ರಾಷ್ಟ್ರದ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂರವರ ಮಾತು ನಕ್ಷತ್ರಗಳನ್ನು ಮುಟ್ಟಲು ಗುರಿ ಇಟ್ಟಾಗ ಚಂದ್ರನನ್ನು ತಲುಪಲು ಸಾಧ್ಯ ಎಂದು ಹೇಳಿದರು. ಅವರ ಮನಸ್ಸಿನಲ್ಲಿ ಧ್ಯೇಯ ಗುರಿಗಳು ಇರಬೇಕೆಂದು ಹೇಳಿದರು.
ಸಹಕಾರಿ ಸಂಘದ ಅಧ್ಯಕ್ಷ ರುಡೊಲ್ಫ್ ಡಿಸಿಲ್ವ ಸ್ವಾಗತಿಸಿ, ಸಂಸ್ಥೆಯು 75 ವರ್ಷಗಳಿಂದ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಕಾರ್ಯದರ್ಶಿ ಓಸ್ವಲ್ಡ್ ಡಿಕುನ್ಹ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಉಪಾಧ್ಯಕ್ಷ ಸುಶೀಲ್ ನೊರೊನ್ಹ ಅತಿಥಿಗಳ ಹಾಗೂ ನಿರ್ದೇಶಕರ ಪರಿಚಯ ಹಾಗೂ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ವಿವಿಯನ್ ಸಿಕ್ವೇರಾ, ಐವನ್ ಪಿಂಟೊ, ಲಾರೆನ್ಸ್ ಪಿಂಟೊ ಶಾಂತಿ ರಸ್ಕೀನ್ಹಾ, ಸಿಂತಿಯಾ ಫರಾಯಸ್, ಜೊಸ್ಸಿ ರೇಗೊ, ಸುನೀಲ್ ವಾಸ್, ನೋಯೆಲ್ ಲೋಬೊ, ಜೇಮ್ಸ್ ಮಾಡ್ತಾ ಉಪಸ್ಥಿತರಿದ್ದರು.







