ಶ್ರೀನಗರ ಭೇಟಿಗೆ ಸಂಬಂಧಿಸಿ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಯೆಚೂರಿ

ಹೊಸದಿಲ್ಲಿ, ಸೆ.2: ಶ್ರೀನಗರ ಭೇಟಿ ನೀಡಿದ ಬಳಿಕ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.
ತಮ್ಮ ಪಕ್ಷದ ಮುಖಂಡ ಮತ್ತು ಮಾಜಿ ಶಾಸಕ ಯೂಸುಫ್ ತಾರಿಗಾಮಿಯನ್ನು ಕಾಣಲು ಶ್ರೀನಗರಕ್ಕೆ ಭೇಟಿ ನೀಡಿದ ಬಳಿಕ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸೀತಾರಾಮ್ ಯೆಚೂರಿ ಅವರಿಗೆ ಹೇಳಿತ್ತು.
ಯೆಚೂರಿ ಅವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ನಂತರ ಅವರ ಸಹೋದ್ಯೋಗಿ ಮತ್ತು ಮಾಜಿ ಶಾಸಕ ಯೂಸುಫ್ ತರಿಗಾಮಿಯನ್ನು ಭೇಟಿ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಯೆಚೂರಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಏನೆಲ್ಲಾ ಇದೆ ಎಂದು ವಿವರ ನೀಡಲು ಸಿವಿಐಎಂ ನಿರಾಕರಿಸಿದ್ದರೂ, ತರಿಗಾಮಿಯ ಆರೋಗ್ಯದ ಬಗ್ಗೆ ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ ಎಂದು ತಿಳಿದು ಬಂದಿದೆ.
Next Story





