ಬೆಂಗಳೂರಿನಲ್ಲಿ ಅಬ್ಬಾಸ್ ಉಸ್ತಾದ್ ಅನುಸ್ಮರಣಾ ಸಮಾವೇಶ

ಬೆಂಗಳೂರು: ಇತ್ತಿಚೇಗೆ ನಿಧನರಾದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಅವರ ಹೆಸರಿನಲ್ಲಿ ಬೆಂಗಳೂರು ಅಲ್ ಮದೀನಾ ಸಮಿತಿ ಹಮ್ಮಿಕೊಂಡ ಬೃಹತ್ ಅನುಸ್ಮರಣಾ ಸಮಾವೇಶವು ಬೆಂಗಳೂರಿನ ಹಲಸೂರಿನ ಮರ್ಕಿನ್ಸ್ ಮರ್ಕಝುಲ್ ಹುದಾ ಮಸ್ಜಿದ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಅಸ್ಸಯ್ಯಿದ್ ಇಬ್ರಾಹೀಂ ಬಾಫಖಿ ತಂಙಳ್ ಕೊಯ್ಲಾಂಡಿ ದುಆ ನೆರವೇರಿಸಿದರು. ಅಲ್ ಮದೀನ ಬೆಂಗಳೂರು ಸಮಿತಿ ಅಧ್ಯಕ್ಷ ಮುಹಮ್ಮದ್ ತಸ್ಲೀಲ್ ಅಧ್ಯಕ್ಷತೆ ವಹಿಸಿದ್ದರು.
ಕ್ಯಾಲಿಕಟ್ ಮರ್ಕಝ್ ನಾಲೆಜ್ ಸಿಟಿ ಡೈರೆಕ್ಟರ್ ಡಾ. ಅಬ್ದುಲ್ ಹಕೀಮ್ ಅಲ್ ಅಝ್ಹರಿ ಮುಖ್ಯ ಅತಿಥಿಯಾಗಿದ್ದರು. ಅಬ್ದುಲ್ ಖಾದರ್ ಸಖಾಫಿ, ಮುನೀರ್ ಸಖಾಫಿ, ಮುಹಮ್ಮದ್ ಕುಂಞಿ ಅಮ್ಜದಿ ಅನುಸ್ಮರಣಾ ಭಾಷಣ ಮಾಡಿದರು. ತಾಜುದ್ದೀನ್ ಫಾಳಿಲಿ ಸ್ವಾಗತಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು. ಟಿ. ಇಫ್ತಿಕಾರ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಗೌರವಾದ್ಯಕ್ಷ ಬಿ ಎಮ್ ಉಮರ್ ಹಾಜಿ, ಅಬ್ದುಲ್ ರಝಾಕ್ ಮಾಸ್ಟರ್ ನಾವೂರು, ಅಲ್ ಮದೀನಾ ಬೆಂಗಳೂರು ಸಮಿತಿ ಕೋಶಾಧಿಕಾರಿ ಅಬ್ದುಲ್ ಹಕೀಂ, ವಾಹಿದ್ ಖಾಯರ್ , ಅನಸ್ ಸಿದ್ದೀಕ್ ಸಖಾಫಿ, ಗಫೂರ್ ಸಖಾಫಿ , ಸವಾದ್ ಉಜಿರೆ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಹಬೀಬ್ ನಾಳ ವಂದಿಸಿದರು.








