ಸೆ. 19 ರಂದು ಭಾರತಕ್ಕೆ ಫ್ರಾನ್ಸ್ ನಿಂದ ಮೊದಲ ರಫೆಲ್ ಫೈಟರ್ ಜೆಟ್ ಹಸ್ತಾಂತರ

ದಿಲ್ಲಿ, ಸೆ.3: ಫ್ರಾನ್ಸ್ ದೇಶ ಭಾರತಕ್ಕೆ ಮೊದಲ ಹಂತದಲ್ಲಿ ನಾಲ್ಕು ರಫೆಲ್ ಫೈಟರ್ ಜೆಟ್ ಗಳನ್ನು ಸೆ,19ರಂದು ಹಸ್ತಾಂತರ ಮಾಡಲಿದೆ.
ಸಮಾರಂಭವು ಫ್ರಾನ್ಸ್ ನ ಮೆರಿಗ್ನಾಕ್ ನಲ್ಲಿ ನಡೆಯಲಿದ್ದು, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಫ್ರಾನ್ಸ್ ಗೆ ತೆರಳುವ ಸಾಧ್ಯತೆ ಇದೆ ಎಂದು ಅಧಕೃತ ಮೂಲಗಳು ತಿಳಿಸಿವೆ.
ಎಲ್ಲಾ 36 ಯುದ್ಧ ವಿಮಾನಗಳು ಮುಂದಿನ ವರ್ಷ ಸೆಪ್ಟೆಂಬರ್ 2022ರ ವೇಳೆಗೆ ಭಾರತಕ್ಕೆ ಬರಲಿವೆ, ಇದು ಬಲಿಷ್ಠ ವಾಯುಸೇನೆಯನ್ನು ಕಟ್ಟುವ ಯೋಜನೆಯ ಮೊದಲ ಹೆಜ್ಜೆಯಾಗಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳಲ್ಲಿ 36 ಜೆಟ್ ಗಳ ಪೈಕಿ ಮೊದಲ ಹಂತದಲ್ಲಿ ಸೆಪ್ಟೆಂಬರ್ ಮೂರನೇ ವಾರದಲ್ಲಿ ಭಾರತಕ್ಕೆ 4 ಜೆಟ್ ಗಳನ್ನು ನೀಡಬೇಕು ಎಂದು ಐಎಎಫ್ ಫ್ರೆಂಚ್ ಸರ್ಕಾರಕ್ಕೆ ತಿಳಿಸಿತ್ತು.
ಸೆಪ್ಟೆಂಬರ್ 23, 2016 ರಂದು ಭಾರತವು ಫ್ರಾನ್ಸ್ ನಿಂದ 59,000 ಕೋಟಿ ರೂ. ವೆಚ್ಚದಲ್ಲಿ 36 ರಫೆಲ್ ಜೆಟ್ ಗಳ ಖರೀದಿಗೆ ಆದೇಶ ನೀಡಿತ್ತು. ಇದು 2019 ರ ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯ ವಿವಾದದ ಕೇಂದ್ರಬಿಂದುವಾಗಿತ್ತು.





