ಅಂತರ್‌ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಕ್ಕೆ 24 ಪದಕ
ಬೆಂಗಳೂರು, ಸೆ.3: ಇತ್ತೀಚೆಗೆ ಕಾಂಬೋಡಿಯಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯದ ಕರಾಟೆ ಸ್ಪರ್ಧಿಗಳು ಭಾಗವಹಿಸಿ 24 ಪದಕಗಳನ್ನು ಜಯಿಸಿದ್ದಾರೆಂದು ಕರಾಟೆ ತರಬೇತುದಾರ ಆರ್.ಗಣೇಶ್ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತರ್‌ರಾಷ್ಟ್ರೀಯ ಕರಾಟೆ ಸರ್ಧೆಯಲ್ಲಿ ರಾಜ್ಯದಿಂದ ತೆರಳಿದ್ದ ನಮ್ಮ ತಂಡಕ್ಕೆ 3 ಚಿನ್ನ, 13 ಬೆಳ್ಳಿ ಹಾಗೂ 8 ಕಂಚು ಪದಕಗಳು ಬಂದಿವೆ ಎಂದು ತಿಳಿಸಿದರು.
ಕಾಂಬೋಡಿಯಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಭಾಗವಹಿಸಲು ನಮ್ಮ ತಂಡಕ್ಕೆ ಹಣಕಾಸಿನ ಕೊರತೆ ಕಾಣಿಸಿತು. ಆದರೂ, ಹಣವನ್ನು ಹೊಂದಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ನಮ್ಮ ಕಠಿಣ ಶ್ರಮ, ತ್ಯಾಗದ ಪ್ರತೀಕವಾಗಿ ನಮ್ಮ ತಂಡಕ್ಕೆ 24 ಪದಕಗಳು ಬಂದಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಪದಕ ಪಡೆದವರು: ತುನುಷ್, ಅಭಿರಾಮ್ ರೆಡ್ಡಿ, ಕೆವಿನ್ ಆದಿತ್ಯಾ, ಪ್ರಣವ್. ಕಲ್ಪಿತಾ ಸುರೇಶ್, ರವೀಂದ್ರ, ಅಕ್ಷಯ್ ಚಂದ್ರಶೇಖರ್, ಅನನ್ಯಾ ವಾಗ್ಲೆ, ಭ್ರಿಥಿ, ಭಾವಿನ್ ಹರೀಶ್, ಪರ್ಗಾವಿ, ಪ್ರಾಣೇಶ್ ಪದಕ ವಿಜೇತರು.





