ಸೆ.5: 'ಗೌರಿ ಲಂಕೇಶ್’ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಂಗಳೂರು, ಸೆ.3: ಗೌರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸೆ.5ರ ಗುರುವಾರ ಬೆಳಗ್ಗೆ 9ಕ್ಕೆ ಗೌರಿ ಲಂಕೇಶ್ ಸಮಾಧಿ ಬಳಿ (ಚಾಮರಾಜಪೇಟೆ) ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದ್ದು, ಈ ವೇಳೆ ಗೌರಿ ಲಂಕೇಶ್ ಒಡನಾಡಿಗಳು, ಅಭಿಮಾನಿಗಳು ಹಾಜರಿರಲಿದ್ದಾರೆ.
ಬೆಳಗ್ಗೆ 10ಕ್ಕೆ ಗೌರಿ ಲಂಕೇಶ್ ಸಮಾಧಿ ಬಳಿಯೇ ಪತ್ರಿಕಾಗೋಷ್ಟಿ ನಡೆಸಲಿದ್ದು, ಗೌರಿ ನೆನಪಿನ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಲಿದ್ದಾರೆ. ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಬರಹಗಾರ ಇಂದೂಧರ ಹೊನ್ನಾಪುರ, ಕವಿತಾ ಲಂಕೇಶ್, ಇಂದಿರಾ ಲಂಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story