ಕ್ಯಾಲಿಫೋರ್ನಿಯ: ದೋಣಿಯಲ್ಲಿ ಬೆಂಕಿ; 33 ಸಾವು

ಲಾಸ್ ಏಂಜಲಿಸ್, ಸೆ. 3: ದಕ್ಷಿಣ ಕ್ಯಾಲಿಫೋರ್ನಿಯ ಕರಾವಳಿಯ ಸಮುದ್ರದಲ್ಲಿ ಸೋಮವಾರ ಮುಂಜಾನೆ ದೋಣಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 33 ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ತಟರಕ್ಷಣಾ ಪಡೆ ತಿಳಿಸಿದೆ.
ಐವರನ್ನು ರಕ್ಷಿಸಲಾಗಿದೆ ಎಂದು ಪಡೆಯ ಲೆಫ್ಟಿನೆಂಟ್ ಕಮಾಂಡರ್ ಮ್ಯಾಥ್ಯೂ ಕ್ರಾಲ್ ‘ಅಸೋಸಿಯೇಟಡ್ ಪ್ರೆಸ್’ಗೆ ತಿಳಿಸಿದರು. ದೋಣಿಯಿಂದ ಜಿಗಿದು ಬೆಂಕಿಯಿಂದ ಪಾರಾಗಿರಬಹುದಾದ ಇತರರಿಗಾಗಿ ತಟರಕ್ಷಣಾ ಪಡೆಯು ಶೋಧ ನಡೆಸುತ್ತಿದೆ ಎಂದರು.
ದೋಣಿಯಲ್ಲಿದ್ದವರು ‘ಲೇಬರ್ ಡೇ’ ವಾರಾಂತ್ಯದಲ್ಲಿ ಚಾನೆಲ್ ದ್ವೀಪಕ್ಕೆ ಪ್ರವಾಸ ಹೋಗಿದ್ದರು. ಸೋಮವಾರ ಪ್ರವಾಸದ ಕೊನೆಯ ದಿನವಾಗಿತ್ತು.
ದೋಣಿಯು ಶನಿವಾರ ಮುಂಜಾನೆ 4 ಗಂಟೆಗೆ ಪ್ರವಾಸ ಹೊರಟಿತ್ತು ಹಾಗೂ ಅದು ಸೋಮವಾರ ಸಂಜೆ 5 ಗಂಟೆಗೆ ವಾಪಸಾಗಬೇಕಾಗಿತ್ತು.
Next Story





