ಸ್ವಾರ್ಥಕ್ಕಾಗಿ ರಾಜೀನಾಮೆ ನೀಡುವ ಜನಪ್ರತಿನಿಧಿಗಳಿಗೆ ದಂಡ: ಆಗ್ರಹ
ಉಡುಪಿ, ಸೆ.3: ಅವಧಿಗೆ ಮುನ್ನವೆ ರಾಜಿನಾಮೆ ನೀಡಿ ಮರುಚುನಾವಣೆ ಎದುರಿಸುವ ಸಂಸದರು, ಶಾಸಕರಿಂದಲೇ ಚುನಾವಣೆ ವೆಚ್ಚವನ್ನು ದಂಡ ರೂಪ ದಲ್ಲಿ ವಸೂಲಿ ಮಾಡುವ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತರಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೆ.ಅಲ್ತಾಫ್ ಅಹಮ್ಮದ್ ಅಂಬಲಪಾಡಿ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಸ್ವಾರ್ಥ ರಾಜಕಾರಣ ಹಾಗೂ ಅಧಿಕಾರದ ಆಸೆಗಾಗಿ ಅವಧಿಗೆ ಮುನ್ನ ರಾಜಿನಾಮೆ ನೀಡಿ, ಮರು ಚುನಾವಣೆ ಸ್ಪರ್ಧಿಸುವ ಕೆಟ್ಟ ಚಾಳಿಯನ್ನು ತಡೆಯಬೇಕಾಗಿದೆ. ಈ ಬಗ್ಗೆ ಆ.31ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಜಿ.ಆರ್.ಕರ್ಕಡ, ಜೇಮ್ಸ್ ನರೋನ್ಹಾ ಉಪಸ್ಥಿತರಿದ್ದರು.
Next Story





