ಬ್ಯಾಂಕ್‌ಗಳ ವಿಲೀನ: ಮುಸ್ಲಿಮ್ ಒಕ್ಕೂಟ ಖಂಡನೆ
ಮಂಗಳೂರು, ಸೆ.3: ದ.ಕ. ಜಿಲ್ಲೆಯ ಕೆನರಾ ಬ್ಯಾಂಕ್‌ನೊಂದಿಗೆ ಉಡುಪಿಯ ಸಿಂಡಿಕೇಟ್ ಬ್ಯಾಂಕ್‌ನ್ನು ಮತ್ತು ಕಾರ್ಪೊರೇಶನ್ ಬ್ಯಾಂಕ್‌ನ್ನು ಯೂನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡಿಸಿದೆ.
ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್‌ಗಳು ಕರಾವಳಿ ಕರ್ನಾಟಕದ ವಾಣಿಜ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಈ ಪ್ರದೇಶದ ಜನರ ಜೀವನಮಟ್ಟವನ್ನು ಅಭಿವೃದ್ಧಿಗೊಳಿಸಲು ಪೂರಕವಾಗಿ ಅರ್ಥಿಕ ಸಹಕಾರ ನೀಡಿದ ಪ್ರತಿಷ್ಠಿತ ಮೂರು ಬ್ಯಾಂಕ್‌ಗಳು ದೇಶದ ಆರ್ಥಿಕ ರಂಗದಲ್ಲಿ ಮಹತ್ತರ ಪಾತ್ರ ವಹಿಸಿದ ಬ್ಯಾಂಕ್‌ಗಳಾಗಿವೆ ಒಕ್ಕೂಟ ತಿಳಿಸಿದೆ.
ಈ ಬ್ಯಾಂಕ್‌ಗಳನ್ನು ಪರಸ್ಪರ ವಿಲೀನಗೊಳಿಸುವುದರೊಂದಿಗೆ ಕರಾವಳಿ ಪ್ರದೇಶವು ದೇಶಕ್ಕೆ ನೀಡಿದ ಆರ್ಥಿಕ ವ್ಯವಹಾರದ ಕೊಡುಗೆಯನ್ನು ನಾಶಪಡಿಸಲಾಗುತ್ತಿದೆ. ಕೇಂದ್ರ ಸರಕಾರದ ಈ ಕ್ರಮ ಖಂಡನೀಯ. ಇದರ ವಿರುದ್ಧ ಸರ್ವರೂ ಒಕ್ಕೊರಲಿನಿಂದ ಪ್ರತಿಭಟಿಸಬೇಕಿದೆ ಎಂದು ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ.





