ಝಾಕಿರ್ ಉಳ್ಳಾಲ ಬಂಧನ: ಪಿಎಫ್‌ಐ ಪ್ರತಿಭಟನೆ ಮುಂದೂಡಿಕೆ
ಮಂಗಳೂರು, ಸೆ.3: ಮಾನವಹಕ್ಕು- ಸಾಮಾಜಿಕ ಹೋರಾಟಗಾರ ಝಾಕಿರ್ ಉಳ್ಳಾಲ ಬಂಧನದ ವಿರುದ್ಧ ಸೆ.2ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಪೊಲೀಸ್ ಮೇಲಾಧಿಕಾರಿಗಳ ವಿನಂತಿ ಮೇರೆಗೆ ಪ್ರತಿಭಟನೆಯನ್ನು ಮುಂದೂಡಲಾಗಿದೆ ಪಾಪ್ಯುಲರ್ ಫ್ರಂಟ್ ತಿಳಿಸಿದೆ.
ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಾಮಾಜಿಕ ಸಂಘಟನೆಗಳ ಸಂವಿಧಾನ ಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ರಾಜಕೀಯ ಪ್ರೇರಿತವಾಗಿ ಕಸಿಯಲು ಪ್ರಯತ್ನಿಸದೆ ನ್ಯಾಯಯುತವಾಗಿ ವರ್ತಿಸುವಂತೆ ಪೊಲೀಸ್ ಅಧಿಕಾರಿಗಳನ್ನು ವಿನಂತಿಸಿದೆ. ಒಂದು ವೇಳೆ ಪೊಲೀಸರು ಹೋರಾಟಗಾರರನ್ನು ಮತ್ತು ಸಾಮಾಜಿಕ ಸಂಘಟನೆಯನ್ನು ದಮನಿಸಲು ಯತ್ನಿಸಿದರೆ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪಾಪ್ಯುಲರ್ ಫ್ರಂಟ್ ಪ್ರಕಟನೆಯಲ್ಲಿ ತಿಳಿಸಿದೆ.
Next Story





