ಮಂಗಳೂರು: ಪ್ಲಾಸ್ಟಿಕ್ ಮಾರಾಟ ವಿರುದ್ಧ ದಾಳಿ, 113 ಕೆಜಿ ಪ್ಲಾಸ್ಟಿಕ್ ವಶ

ಮಂಗಳೂರು, ಸೆ.3: ಪ್ಲಾಸ್ಟಿಕ್ ನಿಷೇಧದ ಕುರಿತು ಕಟ್ಟುನಿಟ್ಟಿನ ಕ್ರಮ ಜರಗಿಸಲಾಗಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ನಗರದ ವಿವಿಧೆಡೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಮಂಗಳವಾರ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ಸೆಂಟ್ರಲ್ ಮಾರುಕಟ್ಟೆ, ಕದ್ರಿ, ಶಿವಭಾಗ್, ಕೊಟ್ಟಾರ ಚೌಕಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ 113 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 22,850 ರೂ. ದಂಡ ವಸೂಲು ಮಾಡಿದೆ.
ಕನಿಷ್ಠ 1500 ಮತ್ತು ಗರಿಷ್ಠ 5000 ರೂ.ವರೆಗೆ ದಂಡ ವಿಧಿಸಲಾಗಿದ್ದು, ಪ್ಲಾಸ್ಟಿಕ್ ಮಾರಾಟದ ವಿರುದ್ಧ ನಿರಂತರವಾಗಿ ದಾಳಿ ನಡೆಯಲಿದೆ ಎಂದು ಪರಿಸರ ಅಭಿಯಂತರ ಮಧು ಎಸ್. ಮನೋಹರ್ ತಿಳಿಸಿದ್ದಾರೆ.

Next Story





