ಬೋಳಿಯಾರ್ : ಭಾರೀ ಮಳೆಗೆ ಕುಸಿದು ಬಿದ್ದ ಮನೆ

ಕೊಣಾಜೆ: ಭಾರೀ ಗಾಳಿ ಮಳೆಗೆ ಬೋಳಿಯಾರ್ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೋರ್ವರ ಮನೆ ಸಂಪೂರ್ಣ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ.
ಬೋಳಿಯಾರ್ ಗ್ರಾಮದ ಗುಂಡ್ಯ ನಿವಾಸಿ ಪರಿಶಿಷ್ಟ ಪಂಗಡದ ಕಮಲ ಬೈದ ಎಂಬವರ ಮನೆ ಸಂಪೂರ್ಣ ಕುಸಿದು ಹಾನಿ ಸಂಭವಿಸಿದೆ. ಈ ಸಂದರ್ಭ ಮನೆಯಲ್ಲಿ ಕಮಲ ಅವರ ಪುತ್ರ ಕೃಷ್ಣ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದರು. ಇವರೆಲ್ಲರೂ ಮನೆ ಬೀಳುವ ಸದ್ದು ಕೇಳಿ ಹೊರಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಸಹಿತ ಹಲವಾರು ದಿನಪಯೋಗಿ ವಸ್ತುಗಳು ನಾಶವಾಗಿದೆ.
Next Story





