Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಈ ಅನಾರೋಗ್ಯಗಳು ನಿಮಗಿವೆ ಎಂದು...

ಈ ಅನಾರೋಗ್ಯಗಳು ನಿಮಗಿವೆ ಎಂದು ಸೂಚಿಸುತ್ತದೆ ಉರಿಮೂತ್ರ

ವಾರ್ತಾಭಾರತಿವಾರ್ತಾಭಾರತಿ4 Sept 2019 7:35 PM IST
share
ಈ ಅನಾರೋಗ್ಯಗಳು ನಿಮಗಿವೆ ಎಂದು ಸೂಚಿಸುತ್ತದೆ ಉರಿಮೂತ್ರ

ಮೂತ್ರ ವಿಸರ್ಜನೆಯ ಸಮಯ ವಿಪರೀತ ನೋವಾಗುತ್ತಿದೆಯೇ? ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ.

ವೈದ್ಯಕೀಯವಾಗಿ ಡಿಸುರಿಯಾ ಎಂದು ಕರೆಯಲಾಗುವ ಉರಿಮೂತ್ರವು ಪುರುಷರು ಮತ್ತು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ.

ಹಲವಾರು ಕಾರಣಗಳು ಈ ಸಮಸ್ಯೆಯನ್ನುಂಟು ಮಾಡಬಲ್ಲವು. ಈ ಸ್ಥಿತಿಯಲ್ಲಿ ಮೂತ್ರಕೋಶ ಮತ್ತು ಸಮೀಪದ ಅಂಗಗಳು ಹಾನಿಗೊಂಡಿರುತ್ತವೆ ಮತ್ತು ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಅತಿಯಾದ ನೋವನ್ನುಂಟು ಮಾಡುತ್ತವೆ. ಕೆಲವೊಮ್ಮೆ ಮೂತ್ರದಲ್ಲಿ ರಕ್ತವೂ ಕಾಣಿಸಿಕೊಳ್ಳುತ್ತದೆ. ಮೂತ್ರನಾಳ ಸೋಂಕುಗಳು,ಎಸ್‌ಟಿಡಿ ಅಥವಾ ಲೈಂಗಿಕ ಕಾಯಿಲೆಗಳು,ಮೂತ್ರಕಲ್ಲುಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳು ಉರಿಮೂತ್ರವನ್ನುಂಟು ಮಾಡುತ್ತವೆ. ಕಾರಣವೇನೇ ಇರಲಿ,ಉರಿಮೂತ್ರವನ್ನೆಂದೂ ಕಡೆಗಣಿಸಬಾರದು. ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅದು ಶರೀರದಲ್ಲಿ ಇತರ ಅನಾರೋಗ್ಯಕ್ಕೆ ನಾಂದಿ ಹಾಡಬಹುದು. ಮಹಿಳೆಯರಲ್ಲಿ ಋತುಚಕ್ರದಲ್ಲಿಯ ಸಮಸ್ಯೆಗಳೂ ಅತಿಯಾದ ಉರಿಮೂತ್ರಕ್ಕೆ ಕಾರಣವಾಗುತ್ತವೆ.

ಇಂತಹ ಸಮಸ್ಯೆ ಎದುರಾದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹೆಚ್ಚು ಪ್ರಮಾಣದಲ್ಲಿ ದ್ರವಗಳ ಸೇವನೆ ಮತ್ತು ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪುರುಷರು ಮತ್ತು ಮಹಿಳೆಯರಲ್ಲಿ ಉರಿಮೂತ್ರವನ್ನುಂಟು ಮಾಡುವ ಕೆಲವು ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿಯಿಲ್ಲಿದೆ.

► ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ಮೂತ್ರ ವಿಸರ್ಜನೆಯ ವೇಳೆ ಅತಿಯಾದ ನೋವು ಅನುಭವಿಸುವಂತೆ ಮಾಡುತ್ತದೆ. ನಿರ್ಜಲೀಕರಣ,ಅನೈರ್ಮಲ್ಯ ಇತ್ಯಾದಿಗಳು ಸೋಂಕಿಗೆ ಕಾರಣವಾಗುತ್ತವೆ. ಮೂತ್ರಕ್ಕೆ ಕೆಟ್ಟ ವಾಸನೆ,ಜ್ವರ,ಹೊಟ್ಟೆ ನೋವು ಇವು ಮೂತ್ರನಾಳ ಸೋಂಕಿನ ಲಕ್ಷಣಗಳಲ್ಲಿ ಸೇರಿವೆ. ಕ್ರಾನ್ಬೆರಿ ಅಥವಾ ಕೆಂಪು ನೇರಳೆ ಎಂದು ಕರೆಯಬಹುದಾದ ಹಣ್ಣಿನ ರಸವು ಮೂತ್ರನಾಳದ ಸೋಂಕಿಗೆ ದಿವ್ಯೌಷಧಿಯಾಗಿದೆ.

► ಮೂತ್ರಪಿಂಡ ಕಲ್ಲುಗಳು

ಸಾಕಷ್ಟು ನೀರನ್ನು ಸೇವಿಸದಿರುವವರು ಮೂತ್ರಪಿಂಡ ಕಲ್ಲುಗಳ ಸಮಸ್ಯೆಯನ್ನು ಎದುರಿಸುವುದು ಹೆಚ್ಚು ಮತ್ತು ಇದು ಉರಿಮೂತ್ರದ ಹಿಂದಿನ ಪ್ರಮುಖ ಕಾರಣವಾಗಿದೆ. ಈ ಕಲ್ಲುಗಳು ಕ್ರಮೇಣ ದೊಡ್ಡದಾಗುತ್ತ ಹೋಗುತ್ತವೆ. ಸಣ್ಣ ಗಾತ್ರದ ಕಲ್ಲುಗಳು ಸಾಮಾನ್ಯವಾಗಿ ಮೂತ್ರದೊಂದಿಗೆ ಹೊರಕ್ಕೆ ತಳ್ಳಲ್ಪಡುತ್ತವೆ. ಆದರೆ ದೊಡ್ಡ ಗಾತ್ರದ ಕಲ್ಲುಗಳು ಹೊಟ್ಟೆನೋವು ಮತ್ತು ಮೂತ್ರ ವಿಸರ್ಜನೆಯ ವೇಳೆ ನೋವನ್ನುಂಟು ಮಾಡುತ್ತವೆ. ಜ್ವರ ಕಾಣಿಸಿಕೊಳ್ಳುವುದೂ ಮೂತ್ರಪಿಂಡ ಕಲ್ಲುಗಳ ಲಕ್ಷಣಗಳಲ್ಲಿ ಒಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಇತ್ಯಾದಿ ದ್ರವಗಳನ್ನು ಸೇವಿಸುವುದರಿಂದ ಮೂತ್ರಪಿಂಡ ಕಲ್ಲುಗಳ ಸಮಸ್ಯೆಯಿಂದ ದೂರವಿರಬಹುದಾಗಿದೆ.

► ಔಷಧಿಗಳ ಅಡ್ಡ ಪರಿಣಾಮಗಳು

ನಾವು ಸೇವಿಸುವ ಪ್ರತಿಯೊಂದೂ ಔಷಧಿಯು ವಿಭಿನ್ನ ಪ್ರತಿವರ್ತನೆಯನ್ನು ಹೊಂದಿರುತ್ತದೆ. ಕೆಲವು ಔಷಧಿಗಳು ಅಡ್ಡ ಪರಿಣಾಮಗಳನ್ನು ಹೊಂದಿದ್ದು,ಇವುಗಳಲ್ಲಿ ಉರಿಮೂತ್ರವೂ ಒಂದಾಗಿದೆ. ಮೂತ್ರಕೋಶದ ಕ್ಯಾನ್ಸರ್ ಪ್ರಕರಣದಲ್ಲಿ ಸೂಚಿಸಲಾಗುವ ಔಷಧಿಯ ಸೇವನೆಯು ಉರಿಮೂತ್ರಕ್ಕೆ ಕಾರಣವಾಗಬಲ್ಲದು. ಉರಿಮೂತ್ರಕ್ಕೆ ಕಾರಣಗಳನ್ನು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ. ಹೆಚ್ಚಿನ ಪ್ರಕರಣಗಳಲ್ಲಿ ಕೆಲವು ಔಷಧಿಗಳು ಎಲ್ಲರಿಗೂ ಸೂಕ್ತವಾಗಿರುವುದಿಲ್ಲ ಮತ್ತು ಉರಿಮೂತ್ರದಂತಹ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.

► ಅಂಡಾಶಯದ ನಾರು ಗಡ್ಡೆಗಳು

ಓವರಿಯನ್ ಸಿಸ್ಟ್ಸ್ ಅಥವಾ ಅಂಡಾಶಯದ ನಾರು ಗಡ್ಡೆಗಳು ಮಹಿಳೆಯರಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು,ಹಲವಾರು ಹಾರ್ಮೋನ್ ಬದಲಾವಣೆಗಳು ಇದಕ್ಕೆ ಕಾರಣವಾಗುತ್ತವೆ. ಯೋನಿಯಲ್ಲಿ ರಕ್ತಸ್ರಾವ,ನೋವಿನಿಂದ ಕೂಡಿದ ಋತುಸ್ರಾವ,ಸ್ತನಗಳಲ್ಲಿ ಮೃದುತ್ವ,ಕೆಳಬೆನ್ನಿನಲ್ಲಿ ನೋವು ಇತ್ಯಾದಿ ಲಕ್ಷಣಗಳು ಕಂಡು ಬಂದರೆ ಅಂಡಾಶಯ ನಾರು ಗಡ್ಡೆಗಳಿವಿಯೇ ಎಂದು ತಿಳಿದುಕೊಳ್ಳಲು ವ್ಯೆದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ನಾರು ಗಡ್ಡೆಗಳು ಹೆಚ್ಚಾಗಿ ಅಂಡಾಶಯದ ಮೇಲೆ ಅಥವಾ ಮೂತ್ರಕೋಶದ ಪಕ್ಕದಲ್ಲಿ ಉಂಟಾಗುತ್ತವೆ. ಉರಿಮೂತ್ರವು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ.

ಉರಿಮೂತ್ರದೊಂದಿಗೆ ರಕ್ತವೂ ಕಾಣಿಸಿಕೊಳ್ಳುತ್ತಿದ್ದರೆ ಅದು ಇತರ ಹಲವಾರು ಅನಾರೋಗ್ಯಗಳನ್ನು ಸೂಚಿಸುವುದರಿಂದ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಕಷ್ಟು ದ್ರವಗಳನ್ನು ಸೇವಿಸುತ್ತಿದ್ದರೆ,ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ನೀಡುತ್ತಿದ್ದರೆ ಇಂತಹ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X