ಹಿರಿಯಡಕ: ಸೃಜನ ಸಿರಿ ಅನಾವರಣ

ಉಡುಪಿ, ಸೆ.4: ಸರಕಾರಿ ಪ್ರಥಮ ದರ್ಜೆ ಕಾಲೇಜು ರಿಯಡಕ ಇಲ್ಲಿನ ವಿದ್ಯಾರ್ಥಿಗಳ ಸೃಜನಶೀಲತೆಗೆ ದ್ಯೋತಕವಾಗಿ ಕಾಲೇಜಿನ ಭಿತ್ತಿ ಪತ್ರಿಕೆ ’ಸೃಜನ ಸಿರಿ’ಯ ಉದ್ಘಾಟನೆಯನ್ನು ಎಂಜಿಎಂ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಂದ್ರನಾಥ್ ಶೆಟ್ಟಿ ಕೊಕ್ಕರ್ಣೆ ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೃಜನಶೀಲತೆಯು ವ್ಯಕ್ತಿತ್ವ ನಿರ್ಮಾಣದ ಒಂದು ಅವಿಭಾಜ್ಯ ಅಂಗ. ಇದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಂಡು ಸೃಜನಾತ್ಮಕ ವಾಗಿ ವಿದ್ಯಾರ್ಥಿಗು ಕ್ರಿಯಾಶೀಲರಾಗಲು ಕರೆ ನೀಡಿದರು.
ಭಿತ್ತಿಪತ್ರಿಕೆ ಸಂಚಾಲಕಿ ಸುಮನಾ ಬಿ. ಸ್ವಾಗತಿಸಿದರು. ಭಿತ್ತಿಪತ್ರಿಕೆ ವಿದ್ಯಾರ್ಥಿ ಸಂಚಾಲಕರಾದ ಅಕ್ಷಯ ಹಾಗೂ ನವನೀತ ವಂದಿಸಿದರು.
Next Story





