ದರೆಗುಡ್ಡೆ ಗ್ರಾ.ಪಂ. ಸದಸ್ಯೆ ಆತ್ಮಹತ್ಯೆ

ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಗ್ರಾಮ ಪಂಚಾಯತ್‍ನ ಬಿಜೆಪಿ ಬೆಂಬಲಿತ ಸದಸ್ಯೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದರೆಗುಡ್ಡೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಸುನಂದಾ(55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮಂಗಳವಾರ ರಾತ್ರಿ ಮನೆಯ ಸದಸ್ಯರು ಮೂಡುಬಿದಿರೆಗೆ ಸಿನಿಮಾ ನೋಡಲು ಹೋಗಿದ್ದು, ಸುನಂದ ಅವರು ತಾನು ಬರುವುದಿಲ್ಲ ಎಂದು ಹೇಳಿದ್ದರು. ರಾತ್ರಿ ಮನೆಯ ಸದಸ್ಯರು ಸಿನಿಮಾ ನೋಡಿ ಬಂದಾಗ ಸುನಂದಾ ಅವರು ಕಾಣಿಸಲಿಲ್ಲ. ಹುಡುಕುವಾಗ ತಮ್ಮ ಮನೆಯ ಪಕ್ಕದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸುನಂದಾ ಅವರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





