ಮೆಲ್ಕಾರ್: ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಸಭೆ

ಬಂಟ್ವಾಳ, ಸೆ. 4: ಮೆಲ್ಕಾರ್-ಪಾಣೆಮಂಗಳೂರು ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆಯಿತು.
ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘವು ಅಭಿವೃದ್ಧಿಯಾಗಲು ಸದಸ್ಯರ ಸಹಕಾರ ಮುಖ್ಯ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸಂಘವು 2018-19ನೇ ಸಾಲಿನ ಮಾರ್ಚ್ ತಿಂಗಳ ಕೊನೆಗೆ 45 ಕೋಟಿ ರೂ. ವ್ಯವಹಾರ ನಡೆಸಿ, 10 ಕೋಟಿ ರೂ. ಠೇವಣಿ ಸಂಗ್ರಹಿಸಿ, 9 ಕೋಟಿ ರೂ. ಸಾಲ ನೀಡಿದೆ. 14,05,033 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 13% ಡಿವಿಡೆಂಟ್ ನೀಡುವುದೆಂದು ಘೋಷಿಸಿದರು.
ನಿರ್ದೇಶಕ ಕೆ. ಸಂಜೀವ ಪೂಜಾರಿ ಸಂಘದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಸಂಘದ ವರದಿ ಮತ್ತು ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರತ್ನಾಕರ ನಾಡಾರು, ಸಂತೋಷ್ ಕುಮಾರ್ ಕೊಟ್ಟಿಂಜ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಉಮೇಶ್ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ಪುಷ್ಪಾವತಿ, ತುಳಸಿ ಇರಾ ಉಪಸ್ಥಿತರಿದ್ದರು.
ಕಕ್ಯಪದವು ಶಾಖಾ ವ್ಯವಸ್ಥಾಪಕ ಚರಣ್ ಕೆ. ವಂದಿಸಿ, ಸಂಘದ ನಿರ್ದೇಶಕ ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.







