ಹಲ್ಲಿ ಬಿದ್ದ ಆಹಾರ ಸೇವನೆ: ಅಂಗನವಾಡಿಯ 10 ಮಕ್ಕಳು ಅಸ್ವಸ್ಥ
![ಹಲ್ಲಿ ಬಿದ್ದ ಆಹಾರ ಸೇವನೆ: ಅಂಗನವಾಡಿಯ 10 ಮಕ್ಕಳು ಅಸ್ವಸ್ಥ ಹಲ್ಲಿ ಬಿದ್ದ ಆಹಾರ ಸೇವನೆ: ಅಂಗನವಾಡಿಯ 10 ಮಕ್ಕಳು ಅಸ್ವಸ್ಥ](https://www.varthabharati.in/sites/default/files/images/articles/2019/09/4/208457-1567616748.jpg)
ಮಂಡ್ಯ, ಸೆ.4: ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿದ ಸುಮಾರು 10 ಮಂದಿ ಅಂಗನವಾಡಿ ಕೇಂದ್ರದ ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಮಂಡ್ಯದ ಗಾಂಧಿನಗರದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದ್ದು, ಕೂಡಲೇ ಮಕ್ಕಳನ್ನು ಮಿಮ್ಸ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರದಲ್ಲಿ ಹಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಈ ಸಂಬಂಧ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story