2019ರಲ್ಲಿ ಭಾರತದ ಯುವ ಶೂಟರ್‌ಗಳ ಗಮನಾರ್ಹ ಸಾಧನೆ ನಾಲ್ಕು ವಿಶ್ವಕಪ್‌ಗಳಲ್ಲಿ 16 ಚಿನ್ನ
ಪುಣೆ, ಸೆ.4: ಭಾರತದ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳು ಕಳೆದ 33 ವರ್ಷಗಳಲ್ಲಿ 2018ರ ತನಕ ನಡೆದ ವಿಶ್ವಕಪ್‌ಗಳಲ್ಲಿ 12 ಚಿನ್ನ ಪಡೆದಿದ್ದರು. 2019ರಲ್ಲಿ ನಡೆದ 4 ವಿಶ್ವಕಪ್‌ಗಳಲ್ಲಿ 16 ಚಿನ್ನ ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ರಿಯೋ ಜನೈರೊದಲ್ಲಿ ನಡೆದ ಈ ವರ್ಷದ ನಾಲ್ಕನೇ ವಿಶ್ವಕಪ್‌ನಲ್ಲಿ ಭಾರತ ಶೂಟರ್‌ಗಳು 9 ಪದಕಗಳನ್ನು ಪಡೆದಿದ್ದರು. ಇದರಲ್ಲಿ ಚಿನ್ನ 5, ಬೆಳ್ಳಿ 2 ಮತ್ತು ಕಂಚು 2.
ಈ ಸಾಲಿನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ಗಳಲ್ಲಿ ಭಾರತದ ಶೂಟರ್‌ಗಳು 22 ಪದಕಗಳನ್ನು ಜಯಿಸಿದ್ದರು. ಇದರಲ್ಲಿ ಚಿನ್ನ 16, ಬೆಳ್ಳಿ 4 ಮತ್ತು 4 ಕಂಚು. 2020ರ ಟೋಕಿಯೋ ಒಲಿಂಪಿಕ್ಸ್‌ಗೆ 9 ಮಂದಿ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿತ್ತು.
ಇತ್ತೀಚೆಗೆ ರಿಯೋ ಜನೈರೊದಲ್ಲಿ ನಡೆದ ಈ ವರ್ಷದ ನಾಲ್ಕನೇ ವಿಶ್ವಕಪ್‌ನಲ್ಲಿ ಭಾರತ ಶೂಟರ್‌ಗಳು 9 ಪದಕಗಳನ್ನು ಪಡೆದಿದ್ದರು. ಇದರಲ್ಲಿ ಚಿನ್ನ 5, ಬೆಳ್ಳಿ 2 ಮತ್ತು ಕಂಚು 2.
ಈ ಸಾಲಿನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ಗಳಲ್ಲಿ ಭಾರತದ ಶೂಟರ್‌ಗಳು 22 ಪದಕಗಳನ್ನು ಜಯಿಸಿದ್ದರು. ಇದರಲ್ಲಿ ಚಿನ್ನ 16, ಬೆಳ್ಳಿ 4 ಮತ್ತು 4 ಕಂಚು. 2020ರ ಟೋಕಿಯೋ ಒಲಿಂಪಿಕ್ಸ್‌ಗೆ 9 ಮಂದಿ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿತ್ತು.
ಭಾರತದ ಶೂಟರ್‌ಗಳಾದ ಸಂಜಯ್ ರಜಪೂತ್, ಅಂಜುಮ್ ವೌದ್ಗಿಲ್ ಅಪೂರ್ವಿ ಚಾಂಡೇಲಾ, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ದಿವ್ಯಾಂಶ್ ಸಿಂಗ್ ಪನ್ವಾರ್, ರಾಹಿ ಸರ್ನೊಬತ್ ಮತ್ತು ಮನು ಭಾಕರ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.