ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿ ಪುತ್ರ ಹೃದಯಾಘಾತದಿಂದ ನಿಧನ
ಈಜಿಪ್ಟ್, ಸೆ.5: ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ, ಇತ್ತೀಚೆಗೆ ನಿಧನರಾದ ಮುಹಮ್ಮದ್ ಮುರ್ಸಿಯವರ ಪುತ್ರ 24 ವರ್ಷದ ಅಬ್ದುಲ್ಲಾ ಮುರ್ಸಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಮುರ್ಸಿ ಕುಟುಂಬವು ಖಚಿತಪಡಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕೆಲವು ತಿಂಗಳುಗಳ ಹಿಂದಷ್ಟೇ ನ್ಯಾಯಾಲಯದಲ್ಲಿ ಕುಸಿದು ಬಿದ್ದು ಮುಹಮ್ಮದ್ ಮುರ್ಸಿ ಮೃತಪಟ್ಟಿದ್ದರು. “ಅಬ್ದುಲ್ಲಾ ಮುರ್ಸಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ” ಎಂದು ಈಜಿಪ್ಟ್ ನ ಸುದ್ದಿ ವಾಹಿನಿಗಳ ವರದಿಗಳು ತಿಳಿಸಿವೆ.
ಹುಸ್ನಿ ಮುಬಾರಕ್ ರ 30 ವರ್ಷಗಳ ಆಳ್ವಿಕೆಯ ನಂತರ ಮುರ್ಸಿ 2012ರಲ್ಲಿ ಈಜಿಪ್ಟ್ ನ ಪ್ರಥಮ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಾದರು. 2013ರಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಸೇನಾ ದಂಗೆಯ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು.
Next Story