ಪಾದುವ ಕಾಲೇಜಿನಲ್ಲಿ ಹೊಸ ನಾಟಕದ ಓದು

ಮಂಗಳೂರು: ಪಾದುವ ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನಗಳ ರಂಗ ಶಿಬಿರದ ಅಂಗವಾಗಿ ಸೆ.6ರಂದು ಚಿಂತಕಿ, ಬರಹಗಾರ್ತಿ, ಉಷಾ ಕಟ್ಟೆಮನೆ ಬರೆದ 'ಸಲಾಂ ತಕ್ಕೋ ಕಡಲೂರ ದೊರೆಯೆ' ಎಂಬ ಹೊಸ ಕನ್ನಡ ನಾಟಕವನ್ನು ಲೇಖಕಿಯೇ ಖುದ್ದಾಗಿ ಶಿಬಿರಾರ್ಥಿಗಳೊಂದಿಗೆ ಓದಲಿದ್ದಾರೆ.
ನಾಟಕವು ಜಾನಪದ ತುಳುನಾಡು ಹಾಗೂ ವರ್ತಮಾನದ ತುಳುನಾಡಿನ ಮುಖಾಮುಖಿಯ ಮೇಲೆ ಬೆಳಕನ್ನು ಚೆಲ್ಲಲಿದ್ದು, ಓದಿನ ಬಳಿಕ ಲೇಖಕಿಯೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಸಂಜೆ ಸರಿಯಾಗಿ 6.15 ಘಂಟೆಗೆ ಪಾದುವ ಕಾಲೇಜಿನ ಸಭಾಂಗಣದಲ್ಲಿ ಪ್ರಾರಂಭವಾಗಲಿದ್ದು, ಆಸಕ್ತರಿಗೆ ಭಾಗವಹಿಸಲು ಅವಕಾಶವಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.
ಕಾರ್ಯಕ್ರಮವನ್ನು ಪಾದುವ ಕಾಲೇಜಿನ ನಾಟಕ ತಂಡವಾದ 'ಪಾದುವ ರಂಗ ಅಧ್ಯಯನ ಕೇಂದ್ರ' ಹಾಗೂ 'ಅಸ್ತಿತ್ವ(ರಿ.) ಮಂಗಳೂರು' ಜಂಟಿಯಾಗಿ ಆಯೋಜಿಸುತ್ತಿದ್ದಾರೆ.
Next Story





