ಫಿಫಾ ವಿಶ್ವಕಪ್ ನ ಅರ್ಹತಾ ಪಂದ್ಯ: ಭಾರತಕ್ಕೆ ಸೋಲು

ಗುವಾಹಟಿ, ಸೆ.5: ಒಮನ್ ವಿರುದ್ಧ ಫಿಫಾ ವಿಶ್ವಕಪ್ ನ ಮೊದಲ ಅರ್ಹತಾ ಪಂದ್ಯದಲ್ಲಿ ಭಾರತ 2-1 ಅಂತರದಲ್ಲಿ ಸೋಲು ಅನುಭವಿಸಿದೆ.
ಇಂದು ನಡೆದ ಪಂದ್ಯದಲ್ಲಿ ಭಾರತದ ಪರ ಸುನೀಲ್ ಛೆಟ್ರಿ ಪಂದ್ಯದ ಪ್ರಥಮಾರ್ಧದಲ್ಲಿ ಗೋಲು ದಾಖಲಿಸಿ 1-0 ಮುನ್ನಡೆ ದೊರಕಿಸಿಕೊಟ್ಟಿದ್ದರೂ, ಅಂತಿಮ ಹಂತದಲ್ಲಿ ರಬಿಯಾ ಅಲಾವಿ ಅಲ್ ಮಂಧರ್ ಅವಳಿ ಗೋಲು ದಾಖಲಿಸಿ ಒಮಾನ್ ಗೆ ಗೆಲುವು ತಂದುಕೊಟ್ಟರು.
ಛೆಟ್ರಿ 24ನೇ ನಿಮಿಷದಲ್ಲಿ ಗೋಲು ಜಮೆ ಮಾಡಿದ್ದರು. ಇದು ಅವರ 72ನೇಯ ಅಂತರ‍್ ರಾಷ್ಟ್ರೀಯ ಗೋಲು ಆಗಿದೆ. ಅದರೆ 82 ಮತ್ತು 90ನೇ ನಿಮಿಷದಲ್ಲಿ ರಬಿಯಾ ಗೋಲು ಬಾರಿಸಿ ಭಾರತಕ್ಕೆ ಆಘಾತ ನೀಡಿದರು.
Next Story





