ಬೀದಿಬದಿ ವ್ಯಾಪಾರಸ್ಥರ ಮತದಾನ ಪಟ್ಟಿ ಪ್ರಕಟ
ಮಂಗಳೂರು, ಸೆ.7: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ‘ಪಟ್ಟಣ ವ್ಯಾಪಾರ ಸಮಿತಿ’ಗೆ ಚುನಾವಣೆಯ ಮುಖಾಂತರ ಸದಸ್ಯರನ್ನು ಆಯ್ಕೆ ಮಾಡುವ ಅಗತ್ಯವಿದ್ದು, ಅದಕ್ಕೆ ಸಂಬಂಧಿಸಿದ ಬೀದಿ ವ್ಯಾಪಾರಸ್ಥರ ಮತದಾನ ಪಟ್ಟಿ ತಯಾರಿಸಲಾಗಿದೆ.
ಸಾರ್ವಜನಿಕರ ಮಾಹಿತಿಗಾಗಿ ಮಂಗಳೂರು ಮಹಾನಗರ ಪಾಲಿಕೆಯ ಸೂಚನಾಫಲಕದಲ್ಲಿ ಬೀದಿಬದಿ ವ್ಯಾಪಾರಸ್ಥರ ಪಟ್ಟಿಯನ್ನು ಪ್ರಚುರ ಪಡಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಸೆ.22ರಂದು ಸಂಜೆ 5:30ರೊಳಗಾಗಿ ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ ಸಲ್ಲಿಸಬಹುದು.
ಕೇಂದ್ರ ಸರಕಾರವು ಬೀದಿಬದಿ ವ್ಯಾಪಾರಸ್ಥರ ಕುರಿತು ರಾಷ್ಟ್ರೀಯ ನೀತಿ ಹೊರಡಿಸಿದ್ದು, ಸರ್ವೋಚ್ಛ ನ್ಯಾಯಾಲಯವು ಸಹ ಬೀದಿ ವ್ಯಾಪಾರಸ್ಥರ ನೀತಿಯನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದೆ. ಅದೇರೀತಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು ‘ಬೀದಿ ವ್ಯಾಪಾರಸ್ಥರ ಸಂರಕ್ಷಣೆ, ಜೀವನೋಪಾಯ ಮತ್ತು ನಿಯಂತ್ರಣ ಕಾಯ್ದೆ-2014ನ್ನು ಹಾಗೂ ರಾಜ್ಯ ಸರಕಾರವು ‘ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮ ಜಾರಿಗೆ ತಂದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.





