ಪಾದುವ ಕಾಲೇಜಿನಲ್ಲಿ "ಸಲಾಂ ತಕ್ಕೋ ಕಡಲೂರ ದೊರೆಯೆ" ನಾಟಕದ ಓದು

ಮಂಗಳೂರು: ಪಾದುವ ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನಗಳ ರಂಗ ಶಿಬಿರದ ಅಂಗವಾಗಿ ಚಿಂತಕಿ, ಬರಹಗಾರ್ತಿ, ಉಷಾ ಕಟ್ಟೆಮನೆ ಬರೆದ 'ಸಲಾಂ ತಕ್ಕೋ ಕಡಲೂರ ದೊರೆಯೆ' ಎಂಬ ಹೊಸ ಕನ್ನಡ ನಾಟಕವನ್ನು ಶಿಬಿರಾರ್ಥಿಗಳಿಗೆ ಹಾಗೂ ಮಂಗಳೂರಿನ ರಂಗಾಸಕ್ತರಿಗೆ ವಾಚಿಸಿದರು.
ಈ ನಾಟಕವು ಜಾನಪದ ತುಳುನಾಡು ಹಾಗೂ ವರ್ತಮಾನದ ತುಳುನಾಡಿನ ಮುಖಾಮುಖಿಯ ಮೇಲೆ ಬೆಳಕನ್ನು ಚೆಲ್ಲಿದ್ದು ಓದಿನ ಬಳಿಕ ಲೇಖಕಿಯೊಂದಿಗೆ ಸಂವಾದವನ್ನೂ ನಡೆಸಲಾಯಿತು. ಹಿರಿಯ ರಂಗಕರ್ಮಿಗಳಾದ ಐಕೆ ಬೊಳುವಾರು, ಚಂದ್ರಹಾಸ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮೊದಲಾದವರು ಭಾಗವಹಿಸಿದ್ದರು.
ಹಿರಿಯ ಹಾಗೂ ಯುವ ಕಲಾವಿದದ ಕೂಡಿದ ಚರ್ಚೆ, ವಿಚಾರ ವಿನಿಮಯ ತಮ್ಮ ಹೊಸ ನಾಟಕದ ಪಠ್ಯಕ್ಕೆ ಬೇಕಾದ ಅಗತ್ಯ ಮಾಹಿತಿ ದೊರಕಿಸಿ ಕೊಡುವಲ್ಲಿ ಸಹಕಾರಿಯಾಯಿತು ಅಷ್ಟೇ ಅಲ್ಲದೇ ದಕ್ಷಿಣ ಕನ್ನಡದ ಜನಪದ ಕಥೆಯನ್ನೇ ಈ ಕೃತಿಯಲ್ಲಿ ಬಳಸಿರುವುದರಿಂದ ಹೊಸದಾದ ನೋಟಗಳಿಂದ ಮತ್ತೊಮ್ಮೆ ಅವಲೋಕಿಸುವ ಅವಕಾಶವನ್ನು ಈ ಚರ್ಚೆ ಕಲ್ಪಿಸಿತು ಎಂದು ಲೇಖಕಿ ಉಷಾ ಕಟ್ಟೆಮನೆಯವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಪಾದುವ ಕಾಲೇಜಿನ ನಾಟಕ ತಂಡವಾದ 'ಪಾದುವ ರಂಗ ಅಧ್ಯಯನ ಕೇಂದ್ರ' ಹಾಗೂ 'ಅಸ್ತಿತ್ವ(ರಿ.) ಮಂಗಳೂರು' ಜಂಟಿಯಾಗಿ ಆಯೋಜಿಸಿದ್ದರು.







