‘ಕೃಷಿ ಭಾಗ್ಯ ಯೋಜನೆ’ಯಲ್ಲಿ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ಸಿಎಂ ಆದೇಶ

ಬೆಂಗಳೂರು, ಸೆ. 8: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಕೃಷಿ ಭಾಗ್ಯ ಯೋಜನೆ’ಯಲ್ಲಿ ಅವ್ಯವಹಾರದ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎರಡು ತಿಂಗಳ ಒಳಗೆ ವರದಿ ನೀಡಲು ಮುಖ್ಯಮತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.
2014-15ನೆ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, 2017-18ರ ಸಾಲಿನಲ್ಲಿ ರಾಜ್ಯ 131 ತಾಲೂಕುಗಳಲ್ಲಿ 2.15 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ನೀಡಿದ್ದು, 921 ಕೋಟಿ ರೂ.ಮೊತ್ತದ ವೆಚ್ಚ ಮಾಡಲಾಗಿದೆ.
ಇದು ಮೇಲುನೋಟಕ್ಕೆ ಸರಿಯಾಗಿಲ್ಲ. ಅಲ್ಲದೆ, ಮೇಲೆ ತಿಳಿಸಿದಷ್ಟು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಲ್ಲ ಎಂಬ ಬಗ್ಗೆ ದೂರುಗಳಿವೆ. ಹೀಗಾಗಿ ಜಿಲ್ಲಾ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದು ತನಿಖೆ ನಡೆಸಿ ವರದಿ ನೀಡಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶಿಸಿದ್ದಾರೆ.
Next Story





