ಮಂಗಳೂರು: ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೊಟರ್ಸ್ ವತಿಯಿಂದ 'ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2'

ಮಂಗಳೂರು, ಸೆ.8: ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೊಟರ್ಸ್ ಆಯೋಜಿಸುತ್ತಿರುವ ಮಂಗಳೂರು 'ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2' ಅಂಗವಾಗಿ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕ್ರೀಡಾಕೂಟವನ್ನು ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ವಹಿಸಿದ್ದರು. ಸಮಾರಂಭದಲ್ಲಿ ಅತಿಥಿಗಳಾಗಿ ಮಂಗಳೂರು ಪರ್ಸಿನ್ ಬೋಟ್ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಇಂಡಿಯನ್ ಡಿಸೈನ್ ಸ್ಕೂಲ್ ಅಧ್ಯಕ್ಷ ಎಂ.ಮುಹಮ್ಮದ್ ನಿಸಾರ್, ವೆಸ್ಟ್‌ಲೈನ್ ಗ್ರೂಪ್ ಅಧ್ಯಕ್ಷ ನಾಸಿರ್, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಸ್. ಭಂಡಾರಿ, ದ.ಕ.ಫುಟ್‌ಬಾಲ್ ಎಸೋಸಿಯೇಶನ್ ಅಧ್ಯಕ್ಷ ಡಿ.ಎಮ್. ಅಸ್ಲಾಂ, ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೊಟರ್ಸ್ ಅಧ್ಯಕ್ಷ ನೂರ್ ಮುಹಮ್ಮದ್, ಸಂಸ್ಥೆಯ ಉಪಾಧ್ಯಕ್ಷ ಶಮೀರ್, ಕಾರ್ಯದರ್ಶಿ ಶನವಾಝ್ ಮೊದಲಾದವರು ಉಪಸ್ಥಿತರಿದ್ದರು.
ಯು.ಎಸ್.ಮಲ್ಯ ಒಳ ಕ್ರೀಡಾಂಗಣದ ನಾಲ್ಕು ಕ್ರೀಡಾಂಗಣದಲ್ಲಿ ಎಂಟು ಪ್ರಾಂಚೈಸಿ ತಂಡಗಳ ಲೀಗ್ ಮಾದರಿಯ ಪಂದ್ಯ ಆರಂಭಗೊಂಡಿತು.

























