ಐದು ತಿಂಗಳಲ್ಲಿ 147 ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸುವಂತೆ ಕೋರಿಕೊಂಡಿದ್ದ ಎಸ್‌ಬಿಐ

ಹೊಸದಿಲ್ಲಿ,ಸೆ.8: ದೇಶದ ಅತ್ಯಂತ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್‌ಬಿಐ ಕಳೆದ ಐದು ತಿಂಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 147 ಲುಕ್ ಔಟ್ ಸುತ್ತೋಲೆ (ಎಲ್‌ಒಸಿ)ಗಳನ್ನು ಹೊರಡಿಸುವಂತೆ ಗೃಹ ಸಚಿವಾಲಯದ ಅಧೀನದ ಬ್ಯೂರೊ ಆಫ್ ಇಮಿಗ್ರೇಷನ್ ಅನ್ನು ಕೋರಿಕೊಂಡಿತ್ತು ಎಂದು ಆರ್‌ಟಿಐ ಅರ್ಜಿಯೊಂದರ ಉತ್ತರದಲ್ಲಿ ತಿಳಿಸಲಾಗಿದೆ.
ಎಪ್ರಿಲ್ ಮತ್ತು ಆಗಸ್ಟ್ ನಡುವೆ 147 ವ್ಯಕ್ತಿಗಳು ದೇಶವನ್ನು ತೊರೆಯುವುದನ್ನು ತಡೆಯಲು ಅವರ ವಿರುದ್ಧ ಎಲ್‌ಒಸಿಗಳಿಗೆ ಕೋರಿದ್ದಾಗಿ ಪುಣೆಯ ಆರ್‌ಟಿಐ ಕಾರ್ಯಕರ್ತ ವಿಹಾರ ದುರ್ವೆ ಅವರ ಅರ್ಜಿಗೆ ನೀಡಿರುವ ಉತ್ತರದಲ್ಲಿ ಎಸ್‌ಬಿಐ ತಿಳಿಸಿದೆ.
2018,ಅ.12ರಂದು ಗೃಹಸಚಿವಾಲಯವು ಅಪರಾಧಿಗಳು ದೇಶ ತೊರೆಯುವುದನ್ನು ತಡೆಯಲು ಅವರ ವಿರುದ್ಧ ಎಲ್‌ಒಸಿಗಳನ್ನು ಕೋರಬಹುದಾದವರ ಪಟ್ಟಿಯಲ್ಲಿ ಸರಕಾರಿ ಬ್ಯಾಂಕುಗಳ ಅಧ್ಯಕ್ಷರು,ಸಿಇಒ ಮತ್ತು ಆಡಳಿತ ನಿರ್ದೇಶಕರನ್ನು ಸೇರ್ಪಡೆಗೊಳಿಸಿತ್ತು.
Next Story





