ಕೊರಂಟಿಕಟ್ಟೆ ಅಲ್‌ನೂರ್ ಮದ್ರಸಕ್ಕೆ ಕೊಡುಗೆ

ಉಡುಪಿ, ಸೆ.8: ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಉಡುಪಿ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕಾಪು ಚಂದ್ರನಗರ ಕೊರಂಟಿಕಟ್ಟೆ ಅಲ್ ನೂರ್ ಮದ್ರಸಕ್ಕೆ ಟೇಬಲ್ ಹಾಗೂ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ, ಲಯನ್ಸ್ ಕ್ಲಬ್‌ನ ಮುಹಮ್ಮದ್ ಹನೀಫ್ ಪುತ್ತಿಗೆ, ಸಲೀಂ, ಹಂಝತ್ ಹೆಜಮಾಡಿ, ಮುಹಮ್ಮದ್ ಮೌಲಾ, ಕುದಿ ವಸಂತ ಶೆಟ್ಟಿ, ಮದ್ರಸ ಉಪಾಧ್ಯಕ್ಷ ಮುಸ್ತಾಕ್ ಅಹ್ಮದ್, ಅಬ್ದುಲ್ ರಝಾಕ್, ಆಲಿಯಬ್ಬ, ಝಿಯಾನ್ ಮೊದಲಾದ ವರು ಉಪಸ್ಥಿತರಿದ್ದರು.
Next Story





