Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 370ನೇ ವಿಧಿ ರದ್ದು: ಮುಂಬೈಯಲ್ಲಿ ನೆಲೆ...

370ನೇ ವಿಧಿ ರದ್ದು: ಮುಂಬೈಯಲ್ಲಿ ನೆಲೆ ಕಳೆದುಕೊಂಡ ಕಾಶ್ಮೀರದ ಗಾಯಕ

ವಾರ್ತಾಭಾರತಿವಾರ್ತಾಭಾರತಿ8 Sept 2019 9:21 PM IST
share
370ನೇ ವಿಧಿ ರದ್ದು: ಮುಂಬೈಯಲ್ಲಿ ನೆಲೆ ಕಳೆದುಕೊಂಡ ಕಾಶ್ಮೀರದ ಗಾಯಕ

ಮುಂಬೈ, ಸೆ.8: ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಈಗ ತನಗೆ ಮುಂಬೈಯಲ್ಲಿ ವಾಸಿಸುತ್ತಿದ್ದ ಮನೆ ಖಾಲಿ ಮಾಡುವಂತೆ ಬಲವಂತಪಡಿಸಲಾಗಿದೆ ಎಂದು ಕಾಶ್ಮೀರದ ಜನಪ್ರಿಯ ಗಾಯಕ ಆದಿಲ್ ಗುರೇಝಿ ಹೇಳಿದ್ದಾರೆ. 24 ವರ್ಷದ ಆದಿಲ್ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿರುವ ಗಾಯಕ. ಕಾಶ್ಮೀರಿ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಹಾಡುವ ಮೂಲಕ ಪ್ರಸಿದ್ಧಿ ಪಡೆದವರು. ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಒಂದು ವರ್ಷದ ಹಿಂದೆ ಮುಂಬೈಗೆ ಆಗಮಿಸಿದ್ದು ಸಂಗೀತ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಇವರಿಗೆ 1,53,000 ಫಾಲೋವರ್ಗಳಿದ್ದಾರೆ. ಕಾಶ್ಮೀರದ ವ್ಯಕ್ತಿ ಎಂಬ ಕಾರಣಕ್ಕೆ ಮುಂಬೈಯಲ್ಲಿ ತನಗೆ ಆರಂಭದಲ್ಲಿ ವಾಸಕ್ಕೆ ಮನೆ ದೊರಕಲು ಕಷ್ಟವಾಗಿದೆ. ಆಗ ಸ್ನೇಹಿತರೊಬ್ಬರ ಸಲಹೆಯಂತೆ, ಹಿಂದು ಸ್ನೇಹಿತರೊಬ್ಬರ ಹೆಸರಿನಲ್ಲಿ ಮನೆಯ ಬಾಡಿಗೆ ಪತ್ರದ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗೆ ಮಾಡಿದ ಮೇಲೆ ಆ ಮನೆಯಲ್ಲಿ ವಾಸಿಸಲು ಆರಂಭಿಸಿದೆ. ಈ ಬೃಹತ್ ನಗರದಲ್ಲಿ ಕೆಲವು ಸಂಗೀತ , ಹಾಡುಗಾರಿಕೆಯ ಕೆಲಸ ದೊರಕಿದ್ದು ಇಲ್ಲೇ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದ್ದೆ. ಆದರೆ 370ನೇ ವಿಧಿ ರದ್ದುಗೊಳಿಸಿದ ಬಳಿಕ ಮನೆ ಮಾಲಕ ಮನೆ ಬಿಡುವಂತೆ ಬಲವಂತಗೊಳಿಸಿದ್ದಾನೆ ಎಂದು ಆದಿಲ್ ಹೇಳಿದ್ದಾರೆ. ಆಗಸ್ಟ್ 1ರಂದು ಕಾಶ್ಮೀರದಲ್ಲಿರುವ ಮನೆಗೆ ತೆರಳಿದ್ದು ಸೆಪ್ಟೆಂಬರ್ 3ಕ್ಕೆ ಮುಂಬೈಗೆ ವಾಪಸಾದಾಗ ಈ ಮನೆಯಲ್ಲಿ ವಾಸ ಮಾಡುವಂತಿಲ್ಲ ಎಂದು ಮನೆಮಾಲಕ ಬ್ರೋಕರ್ ಮೂಲಕ ಸಂದೇಶ ಕಳಿಸಿದ್ದಾನೆ. ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಸ್ಥಗಿತಗೊಳಿಸಿದ ಕಾರಣ ಮುಂಬೈಯ ಬಾಡಿಗೆ ಮನೆಯಲ್ಲಿರುವ ಮಿತ್ರರನ್ನು ಸಂಪರ್ಕಿಸಲು ಆಗಿರಲಿಲ್ಲ. ಅಲ್ಲಿ ತನ್ನ ಕುಟುಂಬ ಪೂರ್ಣ ಕರ್ಪ್ಯೂನಡಿ ಬದುಕುತ್ತಿದೆ. ಜನತೆಯ ಪ್ರಯಾಣವನ್ನೂ ನಿಬರ್ಂಧಿಸಲಾಗಿದೆ. ಇಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿರುವ ಬದಲು ಮುಂಬೈಗೆ ತೆರಳುವಂತೆ ಮನೆಯವರು ಒತ್ತಾಯಿಸಿದ್ದಾರೆ. ಆದರೆ ಮುಂಬೈಯಲ್ಲಿ ಏಕಾಏಕಿ ತನ್ನನ್ನು ಮನೆಯಿಂದ ಹೊರಹಾಕಲಾಗಿದೆ. ಈಗ ತಾತ್ಕಾಲಿಕವಾಗಿ ಪಶ್ಚಿಮ ಮುಂಬೈ ಉಪನಗರದಲ್ಲಿ ಸ್ನೇಹಿತನೊಬ್ಬನ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ. ಆದರೆ ಇಲ್ಲಿ ಹೆಚ್ಚು ಸಮಯ ಇರಲು ಸಾಧ್ಯವಿಲ್ಲ. ಕಾಶ್ಮೀರಿಗಳನ್ನು ದೇಶದ ಇತರೆಡೆ ಗೌರವ ಘನತೆಯಿಂದ ಕಾಣುವಂತಾಗಬೇಕು ಎಂದವರು ಆಗ್ರಹಿಸಿದ್ದಾರೆ. ಮುಂಬೈಗೆ ಮರಳಿದ ಬಳಿಕ ಕಾಶ್ಮೀರದಲ್ಲಿರುವ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಎರಡು ದಿನದ ಹಿಂದೆ ಜಿಲ್ಲಾಧಿಕಾರಿ ಕಚೇರಿಯ ದೂರವಾಣಿಯಿಂದ ಸಹೋದರಿ ತನಗೆ ಕರೆ ಮಾಡಿದ್ದಳು. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಆಕೆ ಏನು ಹೇಳುತ್ತಿದ್ದಾಳೆ ಎಂಬುದು ತನಗೆ ಅರ್ಥವಾಗಲೇ ಇಲ್ಲ. ಜನತೆ ತನ್ನನ್ನು ಮತ್ತು ತನ್ನ ಗಾಯನವನ್ನು ಮೆಚ್ಚಿದ್ದಾರೆ. ಈ ನಗರ ಆಶ್ರಯ ನೀಡಿದೆ. ತಾನೊಬ್ಬ ಸಂಗೀತಗಾರ ಮತ್ತು ವಿಶ್ವದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದ್ದೇನೆ. ಕಾಶ್ಮೀರದ ಯುವಜನತೆ ತನ್ನನ್ನು ಅಭಿಮಾನದಿಂದ ಕಾಣುತ್ತಾರೆ ಮತ್ತು ತಾನು ಅಲ್ಪಾವಧಿಯಲ್ಲಿ ಮಾಡಿರುವ ಸಾಧನೆಯ ಬಗ್ಗೆ ಅವರಿಗೆ ಹೆಮ್ಮೆಯಿದೆ. ಈ ಯವಜನತೆಗೆ ಮುಂಬೈ ಹಾಗೂ ಭಾರತದ ಇತರ ನಗರಗಳಲ್ಲಿ ಸ್ವಾಗತವಿಲ್ಲ ಎಂಬ ಸಂದೇಶ ತಲುಪುವುದನ್ನು ತಾನು ಬಯಸುವುದಿಲ್ಲ. ಈ ಹುಚ್ಚಾಟ ಕೊನೆಯಾಗಬೇಕು ಎಂದು ಆದಿಲ್ ಒತ್ತಾಯಿಸಿದ್ದಾರೆ. ಆದಿಲ್ ಕಾಶ್ಮೀರಕ್ಕೆ ತೆರಳಿದೊಡನೆ ಮನೆ ಮಾಲಿಕ ಬಾಡಿಗೆ ಕರಾರು ಪತ್ರವನ್ನು ನವೀಕರಿಸಿದ್ದು, ಕಾಶ್ಮೀರಿಗಳಿಗೆ ಮನೆ ಬಾಡಿಗೆ ನೀಡುವುದರಿಂದ ಎದುರಾಗಬಹುದಾದ ಸಂಭಾವ್ಯ ಅಪಾಯವನ್ನು ನಿವಾರಿಸಲು ಬ್ರೋಕರ್ ನಿರ್ಧರಿಸಿದರು ಎಂದು ಆದಿಲ್ನೊಡನೆ ಮನೆಯಲ್ಲಿ ವಾಸಿಸುತ್ತಿದ್ದ ಅಜಯ್ ಶಂಕರ್ ಎಂಬಾತ ಹೇಳಿದ್ದಾನೆ. ಆದರೆ ಇದನ್ನು ನಿರಾಕರಿಸಿರುವ ಬ್ರೋಕರ್ಗಳು, ಕಾಶ್ಮೀರಿ ಅಥವಾ ಮುಸ್ಲಿಮ್ ಸಮುದಾಯದ ವ್ಯಕ್ತಿ ಎಂಬ ಕಾರಣಕ್ಕೆ ಯಾವತ್ತೂ ತಾರತಮ್ಯದ ಧೋರಣೆ ತೋರಿಲ್ಲ ಎಂದಿದ್ದಾರೆ. ಮುಂಬೈಯಲ್ಲಿ ಧರ್ಮ, ವೈವಾಹಿಕ ಸ್ಥಿತಿ ಅಥವಾ ಆಹಾರದ ಅಭ್ಯಾಸದ ಆಧಾರದಲ್ಲಿ ತಾರತಮ್ಯ ಎಸಗುವ ಹಲವು ಘಟನೆಗಳು ಈ ಹಿಂದೆಯೂ ವರದಿಯಾಗಿದೆ. ಈ ಪೂರ್ವಾಗ್ರಹದಿಂದ ಹೆಚ್ಚಿನ ತೊಂದರೆಗೊಳಗಾದವರು ಮುಸ್ಲಿಮ್ ಸಮುದಾಯದವರು. ಈ ಮನೋಭಾವ ಭಾರತದಲ್ಲಿ ಇನ್ನೂ ಮುಂದುವರಿದಿದೆ ಎಂದು 2016ರಲ್ಲಿ ವಿಶ್ವಸಂಸ್ಥೆಯ ಸಮರ್ಪಕ ವಸತಿಗಾಗಿನ ವಿಶೇಷ ಪ್ರತಿನಿಧಿ ಲಿಲಾನಿ ಫರ್ಹಾ ಟೀಕಿಸಿದ್ದರು. ಕಾಶ್ಮೀರಿ ಜನರ ದುಸ್ಥಿತಿ ಈ ಹಿಂದೆ ಕಾಶ್ಮೀರದ ಹೊರಗಿನ ಜನರು ಅಲ್ಲಿ ಭೂಮಿಯ ಮೇಲೆ ಯಾವುದೇ ಹಕ್ಕು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ, ಭಾರತದ ಇತರ ನಗರಗಳಲ್ಲಿ ಕಾಶ್ಮೀರದ ಜನತೆಗೆ 370ನೇ ವಿಧಿಯ ದರ್ಶನವಾಗುತ್ತಿದೆ. ದೇಶದ ನಗರದಲ್ಲಿ ದೇಶವಾಸಿಗಳಿಗೆ ಮನೆ ಬಾಡಿಗೆ ಪಡೆಯಲೂ ಸಾಧ್ಯವಿಲ್ಲ ಎಂಬ ಸ್ಥಿತಿ ಖಂಡಿತಾ ಸರಿಯಲ್ಲ ಎಂದು ಆದಿಲ್ ಹೇಳಿದ್ದಾರೆ.
share
ವಾರ್ತಾಭಾರತಿ
ವಾರ್ತಾಭಾರತಿ
Next Story
X