ಆ್ಯಶಸ್ 4ನೇ ಟೆಸ್ಟ್: ಆಸ್ಟ್ರೇಲಿಯಕ್ಕೆ 185 ರನ್ ಗಳ ಜಯ

ಮಾಂಚೆಸ್ಟರ್ ,ಸೆ. 8: ಆಶ್ಯಸ್ ಸರಣಿಯ ನಾಲ್ಕನೆ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 185 ರನ್ ಗಳ ಜಯ ಗಳಿಸಿದೆ.
ಟೆಸ್ಟ್ ನ ಐದನೇ ಹಾಗೂ ಅಂತಿಮ ದಿನವಾಗಿರುವ ರವಿವಾರ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 91.3 ಓವರ್ಗಳಲ್ಲಿ 197 ರನ್ ಗಳಿಗೆ ಆಲೌಟಾಗುವುದರೊಂದಿಗೆ ಆಸ್ಟ್ರೇಲಿಯ ಜಯ ದಾಖಲಿಸಿತು. ಗೆಲುವಿಗೆ 383 ರನ್ ಗಳ ಕಠಿಣ ಸವಾಲು ಪಡೆದಿದ್ದ ಇಂಗ್ಲೆಂಡ್ ಪ್ಯಾಟ್ ಕಮಿನ್ಸ್ (43ಕ್ಕೆ 4), ಜೋಶ್ ಹೆಝಲ್ವುಡ್ (31ಕ್ಕೆ 2), ನಥಾನ್ ಲಿಯೊನ್(51ಕ್ಕೆ 2), ಮಿಚೆಲ್ ಸ್ಟಾರ್ಕ್ (46ಕ್ಕೆ 1) ಮತ್ತು ಮಾಮುಸ್ ಲಾಬುಸ್ಚಾಗ್ನೆ (9ಕ್ಕೆ 1) ಸಂಘಟಿತ ದಾಳಿಗೆ ಸಿಲುಕಿ ಬೇಗನೆ ಆಲೌಟಾಗಿದೆ. ಇದರೊಂದಿಗೆ ಆಸ್ಟ್ರೇಲಿಯ ಐದು ಟೆಸ್ಟ್ ಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ತಂಡದ ಜೋ ಡೇನ್ಲಿ 53 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆಸ್ಟ್ರೇಲಿಯ ಶನಿವಾರ ಎರಡನೇ ಇನಿಂಗ್ಸ್ ನಲ್ಲಿ 42.5 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 186 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
Next Story





