Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಸ್ರೋ ಚಂದ್ರನಲ್ಲಿ ತಲುಪುವಾಗ ಅದರ...

ಇಸ್ರೋ ಚಂದ್ರನಲ್ಲಿ ತಲುಪುವಾಗ ಅದರ ವಿಜ್ಞಾನಿಗಳ ಜೇಬಿಗೆ ಕತ್ತರಿ ಹಾಕಿತ್ತು ಸರಕಾರ !

ಚಂದ್ರಯಾನ-2 ಗೆ ತಿಂಗಳು ಮೊದಲು ಕೇಂದ್ರದ ಆದೇಶದ ವಿರುದ್ಧ ವಿಜ್ಞಾನಿಗಳ ಅಸಮಾಧಾನ

ವಾರ್ತಾಭಾರತಿವಾರ್ತಾಭಾರತಿ8 Sept 2019 11:24 PM IST
share
ಇಸ್ರೋ ಚಂದ್ರನಲ್ಲಿ ತಲುಪುವಾಗ ಅದರ ವಿಜ್ಞಾನಿಗಳ ಜೇಬಿಗೆ ಕತ್ತರಿ ಹಾಕಿತ್ತು ಸರಕಾರ !

ಹೊಸದಿಲ್ಲಿ,ಸೆ.8: ಚಂದ್ರಯಾನ-2ರ ಭಾಗಶಃ ಯಶಸ್ಸಿಗಾಗಿ ಇಸ್ರೋದ ಬಗ್ಗೆ ಇಡೀ ಭಾರತವೇ ಪ್ರಶಂಸೆಗಳ ಮಹಾಪೂರವನ್ನೇ ಹರಿಸುತ್ತಿದೆ. ಇಸ್ರೋ ಏನೋ ಚಂದ್ರನ ಬಳಿಗೆ ತಲುಪಿದೆ, ಆದರೆ ಅದರ ವಿಜ್ಞಾನಿಗಳು ತಮ್ಮ ವೇತನ ಕಡಿತದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ವೇತನ ಕಡಿತಕ್ಕೆ ಪ್ರತಿಭಟನೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಜೂನ್ 12ರ ಸರಕಾರಿ ಆದೇಶವು,ವೇತನಗಳಲ್ಲಿ ಇಮ್ಮಡಿ ಹೆಚ್ಚಳವನ್ನು ಅನುಮೋದಿಸಿದ್ದ 1996ರ ನಿರ್ಧಾರವು ಒದಗಿಸಿದ್ದ ಪ್ರೇರಣಾತ್ಮಕ ಮತ್ತು ಉತ್ತೇಜಕ ಧನವನ್ನು ಹಿಂದೆಗೆದುಕೊಂಡಿದೆ ಎಂದು sirfnews.com ವೆಬ್ ಸೈಟನ್ನು ಉಲ್ಲೇಖಿಸಿ ‘ದಿ ವೈರ್’ ಸುದ್ದಿ ಜಾಲತಾಣವು ವರದಿ ಮಾಡಿದೆ. ಇಸ್ರೋಗೆ ಸೇರಲು ವಿಜ್ಞಾನಿಗಳನ್ನು ಉತ್ತೇಜಿಸಲು ಮತ್ತು ಅದಾಗಲೇ ಸಂಸ್ಥೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದವರಲ್ಲಿ ಸ್ಫೂರ್ತಿ ತುಂಬಲು ಸರ್ವೋಚ್ಚ ನ್ಯಾಯಾಲಯವು ಎರಡು ದಶಕಗಳ ಹಿಂದೆ ಆದೇಶವನ್ನು ಹೊರಡಿಸಿತ್ತು.

ಜೂನ್ 12ರ ಆದೇಶವು ಜುಲೈ 1ರಿಂದ ಅನುಷ್ಠಾನಗೊಂಡಿದ್ದು, ಇದರಿಂದಾಗಿ ಇಸ್ರೋದ ಶೇ.90ಕ್ಕೂ ಅಧಿಕ ಉದ್ಯೋಗಿಗಳು ತಮ್ಮ ಮಾಸಿಕ ವೇತನದಲ್ಲಿ 10,000 ರೂ.ವರೆಗೆ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್ ಸಂಸದ ಮೋತಿಲಾಲ ವೋರಾ ಅವರು ಸಹ ಜು.30ರಂದು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಬಾಹ್ಯಾಕಾಶ ಇಲಾಖೆಯು ಇಸ್ರೋ ಉದ್ಯೋಗಿಗಳಿಗೆ ಹೆಚ್ಚುವರಿ ವೇತನ ಹೆಚ್ಚಳವನ್ನು ಜಾರಿಗೊಳಿಸಿತ್ತು ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದರು. ಈ ಹೆಚ್ಚಳವನ್ನು ಉದ್ಯೋಗಿಗಳ ವೇತನದ ಭಾಗವಾಗಿ ಪರಿಗಣಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಸರಕಾರವು ಇಸ್ರೋ ವಿಜ್ಞಾನಿಗಳ ವೇತನಗಳನ್ನು ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ವೋರಾ ರಾಜ್ಯಸಭೆಯನ್ನು ಕೋರಿಕೊಂಡಿದ್ದರು.

ಸರಕಾರದ ಈ ಕ್ರಮವು ಇಸ್ರೋ ವಿಜ್ಞಾನಿಗಳಿಗೆ ಅಸಮಾಧಾನವನ್ನುಂಟು ಮಾಡಿದೆ. ಸರಕಾರವು ತನ್ನ ಇತ್ತೀಚಿನ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಅದಕ್ಕೆ ಅಹವಾಲು ಸಲ್ಲಿಸಲು ನೆರವಾಗುವಂತೆ ಇಸ್ರೋದ ಸ್ಪೇಸ್ ಇಂಜಿನಿಯರ್ಸ್‌ ಅಸೋಸಿಯೇಷನ್ (ಎಸ್‌ಇಎ) ಜುಲೈ ಅಂತ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಶಿವನ್ ಅವರಿಗೆ ಸಲ್ಲಿಸಿದ್ದ ಲಿಖಿತ ಮನವಿಯು ವಿಜ್ಞಾನಿಗಳು ತಮ್ಮ ಕುಟುಂಬಗಳನ್ನು ಸಲಹಲು ಸಂಪೂರ್ಣವಾಗಿ ವೇತನವನ್ನೇ ನಂಬಿಕೊಂಡಿದ್ದಾರೆ ಮತ್ತು ಅವರಿಗೆ ಇತರ ಯಾವುದೇ ಆದಾಯ ಮೂಲಗಳಿಲ್ಲ ಎನ್ನುವುದನ್ನು ಬೆಟ್ಟುಮಾಡಿತ್ತು.

ಸರಕಾರದ ಕ್ರಮವು 1996ರ ನಿರ್ಧಾರದ ಪ್ರಮುಖ ಆಶಯಕ್ಕೆ ವಿರುದ್ಧವಾಗಿ ವಿಜ್ಞಾನಿಗಳನ್ನು ನಿರುತ್ತೇಜಿಸುತ್ತದೆ ಎಂದು ಎಸ್‌ಇಎ ಅಧ್ಯಕ್ಷ ಎ.ಮಣಿರಾಮನ್ ಅವರು ಸಹಿ ಹಾಕಿರುವ ಪತ್ರವು ಎಚ್ಚರಿಕೆ ನೀಡಿದೆ. ಸರಕಾರದ ನಿರ್ಧಾರವು ಇಸ್ರೋ ವಿಜ್ಞಾನಿಗಳನ್ನು ಹತಾಶರನ್ನಾಗಿಸಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ವಿಜ್ಞಾನಿಗಳ ವೇತನಗಳಿಗೆ ಕೈಹಚ್ಚಬಾರದು ಎಂಬ ಆರನೇ ವೇತನ ಆಯೋಗದ ಶಿಫಾರಸನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸರಕಾರದ ಆದೇಶದಲ್ಲಿ ಸಾಧನೆಯೊಂದಿಗೆ ತಳುಕು ಹಾಕಿಕೊಂಡಿರುವ ಉತ್ತೇಜಕ ಯೋಜನೆ(ಪಿಆರ್‌ಐಎಸ್)ಯನ್ನು ಪ್ರಸ್ತಾಪಿಸಲಾಗಿದೆ. ಪಿಆರ್‌ಐಎಸ್ ಯಾವುದೇ ಸರಕಾರಿ ನೌಕರರ ಮೂಲ ಆದಾಯಕ್ಕೆ ಯಾವುದೇ ಚ್ಯುತಿಯನ್ನುಂಟು ಮಾಡುವುದಿಲ್ಲ. ಹೀಗಾಗಿ ಅದು ಇಸ್ರೋ ಸಿಬ್ಬಂದಿಗಳಿಗೆ ಇಮ್ಮಡಿ ವೇತನ ಹೆಚ್ಚಳದ 1996ರ ನಿರ್ಧಾರಕ್ಕೆ ಯಾವುದೇ ಬಾಧೆಯನ್ನುಂಟು ಮಾಡಕೂಡದು ಎಂದು ಆದೇಶದಲ್ಲಿ ಹೇಳಲಾಗಿದೆ ಎಂದು sirfnews.com ವೆಬ್ ಸೈಟನ್ನು ಉಲ್ಲೇಖಸಿ ‘ದಿ ವೈರ್’ ವರದಿ ಮಾಡಿದೆ.

ಇಸ್ರೋದಲ್ಲಿ ಹುದ್ದೆಗಳನ್ನು ಎ,ಬಿ,ಸಿ,ಡಿ,ಎ,ಎಫ್ ಮತ್ತು ಜಿ ದರ್ಜೆಗಳಲ್ಲಿ ವರ್ಗೀಕರಿಸಲಾಗಿದ್ದು, ಹೆಚ್ಚಿನ ವೇತನ ಶ್ರೇಣಿ ಮತ್ತು ಹುದ್ದೆಯನ್ನು ಪಡೆಯಲು ಪ್ರತಿ ವಿಜ್ಞಾನಿಯೂ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವುದು ಅಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X