ಅಸಾಂಜ್ ವಿರುದ್ಧ ಇನ್ನೂ ಇಬ್ಬರು ಸಾಕ್ಷಿಗಳ ವಿಚಾರಣೆ
ಸ್ಟಾಕ್ಹೋಮ್ (ಸ್ವೀಡನ್), ಸೆ. 9: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧ 2010ರಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವೀಡನ್ನ ಪ್ರಾಸಿಕ್ಯೂಟರ್ಗಳು ಇಬ್ಬರು ಹೊಸ ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಶನ್ ಪ್ರಾಧಿಕಾರ ಸೋಮವಾರ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಈ ಬೇಸಿಗೆಯಲ್ಲಿ ಒಟ್ಟು ಏಳು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ಅದು ಹೇಳಿದೆ.
2010ರ ಆಗಸ್ಟ್ನಲ್ಲಿ ಸ್ಟಾಕ್ಹೋಮ್ನಲ್ಲಿ ನಡೆದ ವಿಕಿಲೀಕ್ಸ್ ಸಮ್ಮೇಳನವೊಂದರಲ್ಲಿ ಅಸಾಂಜ್ರನ್ನು ಭೇಟಿಯಾದ ಬಳಿಕ, ಅವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸ್ವೀಡನ್ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಅಸಾಂಜ್ ಎಪ್ರಿಲ್ನಿಂದ ಬ್ರಿಟನ್ನಲ್ಲಿರುವ ಅತಿ ಭದ್ರತೆಯ ಜೈಲಿನಲ್ಲಿದ್ದಾರೆ. 2012ರಿಂದ ಅವರು ಲಂಡನ್ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ಎಪ್ರಿಲ್ನಲ್ಲಿ ಇಕ್ವೆಡಾರ್ ಆಶ್ರಯವನ್ನು ಹಿಂದಕ್ಕೆ ಪಡೆದ ಬಳಿಕ, ಬ್ರಿಟಿಶ್ ಪೊಲೀಸರು ಅವರನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದರು.
Next Story