Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 13 ಸಾವಿರ ಅಡಿ ಎತ್ತರದಿಂದ ವಿಮಾನದ ಹೊರಗೆ...

13 ಸಾವಿರ ಅಡಿ ಎತ್ತರದಿಂದ ವಿಮಾನದ ಹೊರಗೆ ಹಾರಿದ ವಿಟ್ಲದ ಸಫ್ವಾನ್ ಶಾ !

ರಶೀದ್ ವಿಟ್ಲ.ರಶೀದ್ ವಿಟ್ಲ.10 Sept 2019 8:16 PM IST
share
13 ಸಾವಿರ ಅಡಿ ಎತ್ತರದಿಂದ ವಿಮಾನದ ಹೊರಗೆ ಹಾರಿದ ವಿಟ್ಲದ ಸಫ್ವಾನ್ ಶಾ !

ವಿಟ್ಲ ಸಮೀಪದ ಕೋಡಪದವು ನಿವಾಸಿ ಸಫ್ವಾನ್ ಶಾ ಅವರು ದುಬೈಯ ಪಾಮ್ ಜುಮೈರಾ ಡ್ರೋಪ್ ಝೋನ್ ನಲ್ಲಿ 13,000 ಅಡಿ ಎತ್ತರದಿಂದ ವಿಮಾನದ ಹೊರಗೆ ಹಾರುವ ಮೂಲಕ ಸಾಹಸ ಪ್ರದರ್ಶಿಸಿದ ಅಪರೂಪದ ಘಟನೆ ಸೆಪ್ಟಂಬರ್ 7ರಂದು ನಡೆದಿದೆ.

ವಿಟ್ಲದ ಸಫ್ವಾನ್ ಶಾ ಅವರು ಬಹರೈನ್ ನಲ್ಲಿ ಉದ್ಯೋಗಿ. ಸಾಹಸಮಯ ಪ್ರದರ್ಶನ ಇವರ ಹವ್ಯಾಸ. ಬಹರೈನ್ ನ ಕಡಲಲ್ಲಿ ಬೋಟ್ ಗಳಲ್ಲಿ ಹಲವಾರು ಸಾಹಸ ಪ್ರದರ್ಶನ ಮಾಡಿದ್ದಾರೆ. ಸ್ವಾತಂತ್ರ್ಯ ದಿನ ಭಾರತದ ತ್ರಿವರ್ಣ ಧ್ವಜ ಹಿಡಿದು ಡೈವ್ ಬೋಟ್ ಪ್ರದರ್ಶನ ಮಾಡಿದ್ದ ವೀಡಿಯೊ ವೈರಲ್ ಆಗಿತ್ತು. ಪ್ರಸ್ತುತ ಜಗತ್ತಿನ ಅತಿ ದೊಡ್ಡ ದುಬೈಯ "ಸ್ಕೈ ಡೈವ್" ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಅಭಿಮಾನಿಯಾಗಿರುವ ಸಫ್ವಾನ್ ಶಾ ಸ್ಕೈ ಡೈವ್ ಗಾಗಿ ಬಹರೈನ್ ನಿಂದ ದುಬೈಗೆ ತೆರಳಿ ಈ ಸಾಹಸವನ್ನು ಪ್ರದರ್ಶಿಸಿದ್ದಾರೆ. ಜಗತ್ಪ್ರಸಿದ್ಧ ದುಬೈ ಸ್ಕೈ ಡೈವ್ ದುಬೈಯಿಂದ 35 ಕಿ.ಮೀ. ದೂರದ ಪಾಮ್ ಜುಮೈರಾದಲ್ಲಿದೆ.

ಸುಮಾರು ಎರಡು ತಾಸುಗಳ ಪ್ರಕ್ರಿಯೆಯಲ್ಲಿ ಸುಮಾರು 20 ರಿಂದ 25 ನಿಮಿಷಗಳ ಕಾಲ ಸಫ್ವಾನ್ ಶಾ ಅವರು ಆಕಾಶದಲ್ಲಿ ವಿಹರಿಸಿದ್ದಾರೆ. ಕೈಯ್ಯಲ್ಲಿ "ಐ ಲವ್ ಇಂಡಿಯಾ" ಎಂದು ಬರೆದು ಎದೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿ ಸಾಹಸ ಪ್ರದರ್ಶನ ಮಾಡಿದ್ದಾರೆ. ಕೆಳಗೆ ಇಳಿದ ತಕ್ಷಣ "ನನ್ನ ಈ ಸಾಹಸಕ್ಕೆ ಅಣ್ಣಾಮಲೈ ಸರ್ ಅವರೇ ಪ್ರೇರಣೆ..." ಎಂದು ಘೋಷಿಸಿದ್ದಾರಲ್ಲದೇ ನನಗೆ ಇದು ಜೀವಮಾನದ ಅತ್ಯದ್ಬುತ, ಮೈನವಿರೇಳಿಸುವ ಸನ್ನಿವೇಶ ಎಂದು ಬಣ್ಣಿಸಿದ್ದಾರೆ.

ಸ್ಕೈ ಡೈವ್ ಮಾಡುವಾಗ ಪ್ರಾರಂಭದಲ್ಲಿ ಕೇವಲ ಮಸುಕು ಮಸುಕಾಗಿ ಕಾಣುತ್ತಿತ್ತು. ನಂತರ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ತುದಿ ಗೋಚರಿಸಿತು. ಕ್ರಮೇಣ ಖರ್ಜೂರ ಮರ ಆಕಾರದ ಪಾಮ್ ಜುಮೈರಾ ಕಟ್ಟಡಗಳು, ಸಮುದ್ರ ಕಂಡವು ಎಂದು ಸಫ್ವಾನ್ ಶಾ ವಿವರಿಸಿದರು.

ಸ್ಕೈಡೈವ್ ಪ್ರಾರಂಭಿಸುವ ಮುನ್ನ ಅಣ್ಣಾಮಲೈ ಸಫ್ವಾನ್ ಶಾರಿಗೆ ಫೋನ್ ಮಾಡಿ ಶುಭ ಹಾರೈಸಿದ್ದಾರೆ. ಸ್ಕೈ ಡೈವ್ ಮುಗಿದು ಭೂ ಸ್ಪರ್ಶವಾದ ಬಳಿಕವೂ ಅಣ್ಣಾಮಲೈ ಜೊತೆಗೆ ಅದ್ಭುತ ಅನುಭವವನ್ನು ಹಂಚಿಕೊಂಡಿದ್ದಾರೆ.

25 ನಿಮಿಷದ ದುಬೈ ಸ್ಕೈಡೈವ್ ಗೆ 2,300 ದಿರ್ಹಮ್ (50,000/- ರೂ.) ವೆಚ್ಚ ತಗುಲುತ್ತದೆ. 13,000 ಅಡಿ ಮೇಲೆ ವಿಮಾನದಲ್ಲಿ ತೆರಳಿ ಅಲ್ಲಿಂದ ಪ್ಯಾರಾಚೂಟ್ ಆಧಾರದಲ್ಲಿ ಸಾಹಸಮಯವಾಗಿ ಕೆಳಗೆ ಹಾರುವುದೇ ಈ ಸ್ಕೈಡೈವ್ ನ ವಿಶೇಷತೆ. ಸಫ್ವಾನ್ ಶಾ ಅವರು ಮುಂದಿನ ಸಾಹಸವನ್ನು ಯೂರೋಪ್ ರಾಷ್ಟ್ರದಲ್ಲಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರ ಸಾಹಸ ಯಾತ್ರೆಗೆ ಶುಭವಾಗಲಿ.

share
ರಶೀದ್ ವಿಟ್ಲ.
ರಶೀದ್ ವಿಟ್ಲ.
Next Story
X