Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಳಸ ಬಸದಿಯಲ್ಲಿ ಜೈನ ಶಾಸನ ಪತ್ತೆ

ಕಳಸ ಬಸದಿಯಲ್ಲಿ ಜೈನ ಶಾಸನ ಪತ್ತೆ

ವಾರ್ತಾಭಾರತಿವಾರ್ತಾಭಾರತಿ10 Sept 2019 8:28 PM IST
share
ಕಳಸ ಬಸದಿಯಲ್ಲಿ ಜೈನ ಶಾಸನ ಪತ್ತೆ

ಉಡುಪಿ, ಸೆ.10:ಚಿಕ್ಕಮಗಳೂರು ಜಿಲ್ಲೆ ಕಳಸದ ಚಂದ್ರನಾಥ ತೀರ್ಥಂಕರರ ಬಸದಿಯಲ್ಲಿರುವ ಚಿಕ್ಕ ಚಂದ್ರನಾಥ ತೀರ್ಥಂಕರರ ಪ್ರತಿಮೆಯ ಹಿಂಭಾಗದಲ್ಲಿ ಜೈನ ಶಾಸನವೊಂದು ಪತ್ತೆಯಾಗಿದೆ. ಈ ಪುಟ್ಟ ಶಾಸನದಲ್ಲಿ ಪ್ರತಿ ಸಾಲನ್ನು ಒಂದು ಸೊನ್ನೆಯಿಂದ ಆರಂಭಿಸಲಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲಿನ ಶಾಸನದಲ್ಲಿ ಕಿವಿಯಲಿ ಕೇಳಿ, ಕಂಣಲಿ ನೋಡಿದ ಪಾಪಕೆ ಪ್ರಾಯಶ್ಚಿತ್ತವಾಗಿ ಪ್ರತಿ ಚಂದ್ರನಾಥನ ಅಂದರೆ, ಮೂಲ ಚಂದ್ರನಾಥ ವಿಗ್ರಹದ ಪ್ರತಿರೂಪದ ಚಿಕ್ಕ ಪ್ರತಿಮೆಯನ್ನು ಮಾಡಿಸಲಾಯಿತು ಎಂದು ಈ ಶಾಸನದಲ್ಲಿ ಹೇಳಲಾಗಿದೆ ಎಂದು ಶಾಸನದ ಕುರಿತು ವಿವರಗಳನ್ನು ನೀಡಿರುವ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಶಾಸನದ ಆರಂಭದಲ್ಲಿಯೇ, ಅಂಗೀರಸ ಸಂವತ್ಸರ, ಆಷಾಢ ಶುದ್ಧ ದಶಮಿ ಮೂರು ಎಂದು ಕಾಲವನ್ನು ಉಲ್ಲೇಖಿಸಲಾಗಿದೆ. ಇದು, ಕ್ರಿ.ಶ.1512 ಜುಲೈ 2 ಶುಕ್ರವಾರಕ್ಕೆ ಸರಿಹೊಂದುತ್ತದೆ. ಶಾಸನದಲ್ಲಿ ಕಳಸದ ದೇವಚಂದ್ರ ಜೈನ ಮುನಿಗಳನ್ನು ಹೆಸರಿಸಲಾಗಿದೆ. ಇದೇ ಬಸದಿಯ ಪ್ರಧಾನ ಅಧಿದೇವತೆಯಾದ ಚಂದ್ರನಾಥ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಬರೆದ ಶಾಸನದಲ್ಲಿ ಮೂಲಸಂಘ, ಪನಸೋಗೆ ಬಳಿ, ದೇಶೀಯ ಗಣ, ಪುಸ್ತಕ ಗಚ್ಚ, ಕುಂದಕುಂದಾನ್ವಯ ಲಲಿತಕೀರ್ತಿ ದೇವರ ಶಿಷ್ಯರಾಗಿದ್ದ ದೇವಚಂದ್ರ ದೇವರು ಈ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಷಯವನ್ನು ಹೇಳಲಾಗಿದೆ.

ಶಾಸನೋಕ್ತ ಪನಸೋಗೆ ಗ್ರಾಮವು ಈಗಿನ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಅತ್ಯಂತ ಪ್ರಾಚೀನ ಐತಿಹಾಸಿಕ ನೆಲೆ. ಚೆಂಗಾಳ್ವರ ಆಡಳಿತ ಕೇಂದ್ರ. 11ನೇ ಶತಮಾನದಲ್ಲಿ ಹನಸೋಗೆ ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಅಲ್ಲಿ 60ಕ್ಕೂ ಹೆಚ್ಚು ಬಸದಿಗಳು ಇದ್ದ ಬಗ್ಗೆ ಶಾಸನಾಧಾರಗಳಿವೆ. ಅಲ್ಲಿ ತ್ರಿಕೂಟಾಚಲ ಜೈನ ಬಸದಿ ಇದೆ. ಚಂಗಾಳ್ವರ ದೊರೆ ವೀರ ರಾಜೇಂದ್ರನು ಆದಿನಾಥ, ಚಂದ್ರನಾಥ ಮತ್ತು ನೇಮಿನಾಥ ತೀರ್ಥಂಕರರ ಬಸದಿಯನ್ನು ನಿರ್ಮಿಸಿದ್ದಾನೆ.

ಕಳಸದ ದೇವಚಂದ್ರ ದೇವ ಪನಸೋಗೆಯ ಲಲಿತಕೀರ್ತಿಗಳ ಶಿಷ್ಯರಾಗಿದ್ದರು. ಶೈವ-ಜೈನ ಸಂಘರ್ಷಗಳಿಂದ ದೇವಚಂದ್ರ ಕಳಸಕ್ಕೆ ಬಂದು ಚಂದ್ರನಾಥ ಬಸದಿಯನ್ನು ನಿರ್ಮಾಣ ಮಾಡಿದರು. ಅದೇ ಬಸದಿಯ ಚರ್ತುವಿಂಶತಿ ತೀರ್ಥಂಕರರ ವಿಗ್ರಹದ ಪೀಠದಲ್ಲಿನ ಶಾಸನದಲ್ಲಿ, ಶ್ರೀಚಂದ್ರನಾಥನ ಚೈತ್ಯಾಲಯದಲು ತೊಳಹರ ಬಳಿಯ ಅನತಕಶೆಟ್ಟಿತಿಯ (ಅನಂತಕ್ಕಶೆಟ್ಟಿತಿ) ಮಗ ಆದಿಶೆಟ್ಟಿ ಚರ್ತುವಿಂಶತಿ ತೀರ್ಥಂಕರರ ಪ್ರತಿಮೆಯನು ಯಿರಿಸಿ ಕೃತಾರ್ತನಾದದ್ದನ್ನು ದಾಖಲಿಸಿದೆ.

ಈ ಶಾಸನದ ಕಾಲ ಕ್ರಿ.ಶ. 1535. ಅಂದರೆ, 1535ರ ಕಾಲಕ್ಕೆ ಚಂದ್ರನಾಥ ಬಸದಿ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಸಾಂತರ ಆಳ್ವಿಕೆಗೆ ಒಳಪಟ್ಟ ಹಲವು ಪ್ರಮುಖ ಜೈನ ತೀರ್ಥಕ್ಷೇತ್ರಗಳಲ್ಲಿ ಕಳಸವನ್ನೂ ಹೆಸರಿಸಲಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಶಾಸನದ ಕಾಲ ಕ್ರಿ.ಶ. 1512. ಈ ಕೊನೆಯ ಎರಡು ಶಾಸನಗಳ ಕಾಲಕ್ಕಿಂತ ಮೊದಲೇ, ಲಲಿತಕೀರ್ತಿ ಮುನಿಗಳ ಶಿಷ್ಯರಾದ ದೇವಚಂದ್ರರು ಚಂದ್ರನಾಥ ತೀರ್ಥಂಕರರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರೆಂದು ಇದರಿಂದ ತಿಳಿಯುತ್ತದೆ. ಇದು ವಿಜಯನಗರದ ಮಾಂಡಲೀಕರಾಗಿದ್ದ ಕಳಸ-ಕಾರ್ಕಳದ ಭೈರರಸ ಒಡೆಯರ ಕಾಲದ ಶಾಸನವಾಗಿದೆ. ಇವರು ತಮ್ಮನ್ನು ಕಳಸ ಕಾರ್ಕಳದ ಅರಸರೆಂದೇ ಗುರುತಿಸಿಕೊಂಡರು ಎಂದು ಇತಿಹಾಸಜ್ಞ ಪಿ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

ಶಾಸನೋಕ್ತ ಚಂದ್ರಪ್ರಭ ಅಥವಾ ಚಂದ್ರನಾಥ ತೀರ್ಥಂಕರ 24 ಜನ ಜೈನ ತೀರ್ಥಂಕರರಲ್ಲಿ 8 ನೆಯವರು ಅಥವಾ ಎಂಟನೇ ತೀರ್ಥಂಕರ. ಚಂದ್ರ ಅಥವಾ ಅರ್ಧಚಂದ್ರ ಆತನ ಲಾಂಛನವಾಗಿದೆ. ನಾಗ ಅಥವಾ ನಾಗಕೇಸರ ಆತನ ಪವಿತ್ರ ವೃಕ್ಷವಾಗಿದೆ. ಜ್ವಾಲಾ-ಮಾಲಿನ ಆತನ ಅಭಿಮಾನಿ ದೇವತೆಯಾಗಿದ್ದಾಳೆ ಎಂದು ಪ್ರೊ.ಟಿ.ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಹಂಪೆ ಕನ್ನಡ ವಿಶ್ವದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಕಳಸದ ಸುಪ್ರೀತ ಕೆ.ಎನ್. ಹಾಗೂ ಕಳಸದ ಚಂದ್ರನಾಥ ಬಸದಿಯ ಅರ್ಚಕರಾದ ಅಜಿತ್ ಅವರಿಗೆ ಪ್ರೊ.ವುುರುಗೇಶಿ ಕೃತಜ್ಞತೆ ಸಲ್ಲಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X