ಸುಂದರ ಮಂಗಳೂರು ನಿರ್ಮಾಣ: ಶಾಸಕ ಕಾಮತ್
ಸ್ಮಾರ್ಟ್‌ಸಿಟಿ ಪ್ರದರ್ಶನ ಉದ್ಘಾಟನೆ

ಮಂಗಳೂರು, ಸೆ.10: ಯುನೈಟೆಡ್ ಕಿಂಗ್‌ಡಂನ ಕಾರ್ಡ್ಿ ವಿಶ್ವವಿದ್ಯಾನಿಲಯ ಹಾಗೂ ದಿಲ್ಲಿಯ ಸ್ಕೂಲ್ ಆ್ ಪ್ಲಾನಿಂಗ್ ಆಂಡ್ ಅರ್ಕಿಟೆಕ್ಚರ್(ಎಸ್‌ಪಿಎ)ನ ನಗರ ವಿನ್ಯಾಸ ವಿಭಾಗದವರು ಜಂಟಿಯಾಗಿ ನಡೆಸಿದ ಅಧ್ಯಯನ ವರದಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಾಪಾರ್ಟು ಮಾಡಿಕೊಂಡು ನಮ್ಮ ವ್ಯವಸ್ಥೆಗೆ ಅಳವಡಿಸಿಕೊಳ್ಳಬಹುದು. ಇದರಿಂದ ಸುಂದರ ಮಂಗಳೂರು ನಿರ್ಮಾಣ ಸಾಧ್ಯವಾಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಹಾಗೂ ವೆಲ್ಸ್ ಸರಕಾರದ ಸಹಭಾಗಿತ್ವದಲ್ಲಿ ‘ವಾಸಯೋಗ್ಯ ನಗರೀಕರಣ ಮಂಗಳೂರು’ ಕುರಿತು ಎರಡು ದಿನಗಳ ಪ್ರದರ್ಶನವನ್ನು ಮಂಗಳವಾರ ನಗರದ ಮಿನಿ ಟೌನ್‌ಹಾಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನದಿ ಅಭಿಮುಖ ಪ್ರದೇಶದಲ್ಲಿ ಮಂಗಳೂರು ಮಹಾನಗರಪಾಲಿಕೆ, ಬಂದರು ಹಾಗೂ ಸಿಆರ್‌ಝಡ್ ವ್ಯಾಪ್ತಿಗೆ ಸೇರಿದ ಜಾಗವಿದೆ. ಇದನ್ನು ವ್ಯವಸ್ಥಿತವಾಗಿ ಜೋಡಿಸುವ ಕಾರ್ಯ ನಡೆಸಬೇಕು. ಎಳೆಂಟು ಜಿಲ್ಲೆಗಳಿಂದ ರೋಗಿಗಳು ಬರುವ ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಯನ್ನು ಕೂಡ ಸ್ಮಾರ್ಟ್‌ಸಿಟಿಯಡಿ ಅಭಿವೃದ್ಧಿಪಡಿಸುವ ಪ್ರಸ್ತಾಪವಿದೆ ಎಂದು ಅವರು ನುಡಿದರು.
ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಪ್ರಭಾರ ಆಡಳಿತ ನಿರ್ದೇಶಕಿ ಸ್ನೇಹಾಲ್, ಕ್ರೆಡಾಯ್ ಅಧ್ಯಕ್ಷ ನವೀನ್ ಕಾರ್ಡೊಜ ಮಾತನಾಡಿದರು. ಯುನೈಟೆಡ್ ಕಿಂಗ್‌ಡಂನ ಕಾರ್ಡ್ ಯುನಿವರ್ಸಿಟಿಯ ವಾಸ್ತು ಉಪನ್ಯಾಸಕ ಹಾಗೂ ನಗರ ವಿನ್ಯಾಸಕಾರ ಡಾ.ಶಿಬು ರಾಮನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ರೆಡಾಯ್ ಪ್ರಧಾನ ಕಾರ್ಯದರ್ಶಿ ವಿನೋದ್ ಪಿಂಟೋ, ಸ್ಮಾರ್ಟ್‌ಸಿಟಿ ಸ್ವತಂತ್ರ ನಿರ್ದೇಶಕ ಡಿ.ಬಿ. ಮೆಹ್ತಾ, ಜನರಲ್ ಮೆನೇಜರ್‌ಗಳಾದ ಅರುಣ ಪ್ರಭಾ, ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮುಹಮ್ಮದ್ ನಝೀರ್ ಸ್ವಾಗತಿಸಿ ದರು. ಬ್ರಿಟಿಷ್ ಹೈ ಕಮಿಷನರ್ ಪ್ರತಿನಿಧಿ ರಶ್ಮಿ ರಂಜನ್ ದಿಕ್ಸೂಚಿ ಭಾಷಣ ಮಾಡಿದರು.







