ಮಂಗಳೂರು: ಶಾಹೀನ್ ಫಾಲ್ಕನ್ ಕಾಲೇಜಿನಲ್ಲಿ ಫುಡ್ ಫೆಸ್ಟಿವಲ್

ಮಂಗಳೂರು: ಶಾಹೀನ್ ಫಾಲ್ಕನ್ ಕಾಲೇಜಿನಲ್ಲಿ 'ಫುಡ್ ಫೆಸ್ಟಿವಲ್' ಕಾರ್ಯಕ್ರಮವು ಪ್ರಾಂಶುಪಾಲರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ನಂತರ ಮಾತನಾಡಿದ ಅವರು 'ಊಟಬಲ್ಲವನಿಗೆ ರೋಗವಿಲ್ಲ' ಎಂಬಂತೆ ಊಟ, ಉಪಹಾರಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಅತೀವ ಆಸಕ್ತಿ. ವಿದ್ಯಾರ್ಥಿಗಳ ಕಿವಿಗೆ ಹೀಗೊಂದು ಕಾರ್ಯಕ್ರಮವಿದೆ ಎಂಬ ಸಂಗತಿ ಬಿದ್ದದ್ದೇ ತಡ, ಎಲ್ಲರೂ ಕಾರ್ಯ ಪ್ರವೃತ್ತರಾದರು. ಹೊಸ ಯೋಜನೆಗಳನ್ನು ಹಾಕತೊಡಗಿದರು ಎಂದು ಹೇಳಿದರು.
ವಿದ್ಯಾರ್ಥಿಗಳ ಒಂದೊಂದು ತಂಡಕ್ಕೆ ಒಂದೊಂದು ತಯಾರಿಯ ಯೋಜನೆ ರೂಪುಗೊಂಡಿತು. ಅಡುಗೆ ಮನೆಗೆ ಸುಳಿಯದವರಿಗೂ ಇಂದೊಂದು ಹೊಸ ಪ್ರಯೋಗದ ಅನುಭವ ಕೊಟ್ಟಿತು. ಈ ಸಂದರ್ಭ ಬಿರಿಯಾನಿ, ಟಿಕ್ಕಾ, ಕಬಾಬ್, ಸ್ಯಾಂಡ್‍ವಿಚ್, ಸೂಪ್, ಕೇಕ್, ಸಲಾಡ್, ಜ್ಯೂಸ್ ತಯಾರಿಸಲಾಯಿತು.






Next Story