ಎಂಸಿಸಿ ಬ್ಯಾಂಕ್ ನ ನೂತನ ಎಟಿಎಂ ಮತ್ತು ನವೀಕೃತ ಕಂಕನಾಡಿ ಶಾಖೆ ಉದ್ಘಾಟನೆ

ಮಂಗಳೂರು, ಸೆ.12: ಕಂಕನಾಡಿ ಬಳಿ ಎಂಸಿಸಿ ಬ್ಯಾಂಕ್ ನ ನೂತನ ಎಟಿಎಂ ಉದ್ಘಾಟನೆ ಮತ್ತು ಹವಾ ನಿಯಂತ್ರಿತ ನವೀಕೃತ ಕಂಕನಾಡಿ ಶಾಖೆ ಉದ್ಘಾಟನೆ ಕಾರ್ಯಕ್ರಮ ಗುರುವಾರ ಜರುಗಿತು.
ಜೆಪ್ಪು ಸಂತ ಅಂತೋನಿ ಆಶ್ರಮದ ಧರ್ಮ ಗುರು ವಂ.ಓನಿಲ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಬ್ಯಾಂಕ್ ಗ್ರಾಹಕ ಸೇವೆಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಲಾಭ ಗಳಿಕೆಯೇ ಮುಖ್ಯ ಗುರಿ ಅಲ್ಲ ಎಂದರು.
ಎಂಸಿಸಿ ಬ್ಯಾಂಕ್ ಗ್ರಾಹಕರಿಗೆ ಉಚಿತವಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡುತ್ತದೆ. ಗ್ರಾಹಕರಿಗೆ ಗರಿಷ್ಠ ಮಟ್ಟದ ಉತ್ಕೃಷ್ಟ ಸೇವೆ ನೀಡುವುದು ಮುಖ್ಯ ಗುರಿ. ಎನ್ಆರ್ ಐ ಶಾಖೆ ಹೊಂದಿರುವ ರಾಜ್ಯದ ಎರಡನೆ ಬ್ಯಾಂಕ್ ಎಂದರು.
ಅತಿಥಿಗಳಾಗಿ ಮಾಂಡ್ ಸೊಬಾಣ್ ಸಂಸ್ಥೆ ಯ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ, ಉದ್ಯಮಿ ಜೊಸೇಫ್ ಸಿಕ್ವೇರ, ಅನಿಲ್ ದಾಸ್, ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಯು., ನಿರ್ದೇಶಕರಾದ ಐರಿನ್ ಲೋಬೊ, ಮೈಕೆಲ್ ಡಿಸೋಜ, ಬ್ಯಾಂಕ್ ನ ಜಿ.ಎಂ.ಸುನೀಲ್ ಮಿನೇಜಸ್, ಶಾಖಾಧಿಕಾರಿ ಲೂರಾ ಡಿಕುನ್ಹಾ ಫೆರ್ನಾಂಡಿಸ್, ಡೆರಿಲ್ ಲಸ್ರಾದೊ ಮತ್ತಿತರರು ಉಪಸ್ಥಿತರಿದ್ದರು.
.gif)
.gif)
.gif)
.gif)
.gif)
.gif)
.gif)
.gif)