Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಗೋಹತ್ಯೆ, ರಾಮಮಂದಿರ ವಿಚಾರಗಳಿಗೆ...

ಗೋಹತ್ಯೆ, ರಾಮಮಂದಿರ ವಿಚಾರಗಳಿಗೆ ಪ್ರಾಶಸ್ತ್ಯದಿಂದ ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆಗಳ ಕಡೆಗಣನೆ

'ಸಾಮಾಜಿಕ ತಲ್ಲಣಗಳು' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ರಾಮ್ ಪುನಿಯಾನಿ

ವಾರ್ತಾಭಾರತಿವಾರ್ತಾಭಾರತಿ12 Sept 2019 6:54 PM IST
share
ಗೋಹತ್ಯೆ, ರಾಮಮಂದಿರ ವಿಚಾರಗಳಿಗೆ ಪ್ರಾಶಸ್ತ್ಯದಿಂದ ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆಗಳ ಕಡೆಗಣನೆ

ಬೆಂಗಳೂರು, ಸೆ.12: ಸ್ವಾತಂತ್ರಕ್ಕಾಗಿ ಹೋರಾಡಿದವರು ದೇಶದ ನೈಜ ಸಮಸ್ಯೆಗಳನ್ನು ಮುಂದಿಟ್ಟರೆ, ಇದೀಗ ಆರೆಸ್ಸೆಸ್ ರಾಮಮಂದಿರ, ಗೋ ಹತ್ಯೆಯನ್ನು ಮುಂದಿಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ರೈತರ ಆತ್ಮಹತ್ಯೆ, ನಿರುದ್ಯೋಗದಂತಹ ಸಮಸ್ಯೆಗಳು ಗಮನಕ್ಕೆ ಬರುತ್ತಿಲ್ಲ ಎಂದು ಸಾಹಿತಿ ಹಾಗೂ ಸಂಶೋಧಕ ರಾಮ್ ಪುನಿಯಾನಿ ಹೇಳಿದ್ದಾರೆ.

ಗುರುವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬೆಂಗಳೂರು ನಗರದ ದಕ್ಷಿಣ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ 'ಸಾಮಾಜಿಕ ತಲ್ಲಣಗಳು' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕೋಮುವಾದದ ಪ್ರಕ್ಷುಬ್ಧತೆ ವಿಷಯದ ಕುರಿತು ಅವರು ಮಾತನಾಡಿದರು.

ಸೌಹಾರ್ದ ಸಂಕೇತವಾಗಬೇಕಿದ್ದ ನಮ್ಮ ದೇಶದ ಇತಿಹಾಸವನ್ನು ಕೋಮುವಾದಿ ಚರಿತ್ರೀಕರಣಗೊಳಿಸಿದ್ದಾರೆ. ಸ್ವಾತಂತ್ರದ ನಂತರ ಕೆಲವೊಂದು ಶಕ್ತಿಗಳು ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್‌ರು ಒಂದಾಗಿ ಹೋರಾಟ ಮಾಡಿದ್ದಾರೆ ಎಂದ ಅವರು, ಭಾರತದಲ್ಲಿ ರಾಜ, ಮಹಾರಾಜರ ನಡುವೆ ಯುದ್ದ ನಡೆದಿದ್ದು ಹಣ ಮತ್ತು ಅಧಿಕಾರಕ್ಕಾಗಿ ಹೊರತು ಧರ್ಮ ವಿಸ್ತರಣೆಗಾಗಿ ಅಲ್ಲ ಎಂದರು.

ಅಕ್ಬರ್, ಔರಂಗಜೇಬ್ ಸೇರಿದಂತೆ ಎಲ್ಲ ರಾಜರು ಕೇವಲ ಆಡಳಿತದ ವಿಸ್ತರಣೆಗಾಗಿ ಯುದ್ಧ ಮಾಡಿದ್ದಾರೆ. ದೇವಾಲಯ, ಮಂದಿರ ಮಸೀದಿಗಳನ್ನು ಉರುಳಿಸಿ, ಅದರಲ್ಲಿದ್ದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಆದರೆ, ಕೆಲವರು ಇತಿಹಾಸವನ್ನೇ ಮರೆಮಾಚಿ ಎಲ್ಲದಕ್ಕೂ ಕೋಮು ಬಣ್ಣ ಬಳಿಯುವ ಮೂಲಕ ಧರ್ಮ ಸಂಘರ್ಷಕ್ಕಾಗಿ ಯುದ್ಧ ನಡೆದಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ರಾಣಾ ಪ್ರತಾಪ್ ಹಾಗೂ ಅಕ್ಬರ್ ಮಧ್ಯೆ ನಡೆದ ಯುದ್ಧವು ಕೇವಲ ಸಾಮ್ರಾಜ್ಯ ವಿಸ್ತರಣೆಗಾಗಿ ನಡೆದದ್ದು. ಅಕ್ಬರ್ ಸೇನೆಯನ್ನು ರಾಜ ಮಾನ್‌ಸಿಂಗ್ ಮುನ್ನಡೆಸಿದರೆ, ರಾಣಾ ಪ್ರತಾಪ್ ಸೇನೆಯನ್ನು ಅಝಂಖಾನ್ ಮುನ್ನಡೆಸಿದ್ದ. ಅಂದರೆ, ಇಬ್ಬರ ಸೇನೆಯಲ್ಲಿಯೂ ಎಲ್ಲ ಧರ್ಮದವರಿದ್ದರು. ಆದರೆ, ಈ ಯುದ್ಧವನ್ನು ಹಿಂದು ಮತ್ತು ಮುಸ್ಲಿಮ್ ಧರ್ಮೀಯರ ನಡುವೆ ನಡೆದದ್ದು ಎಂದು ವ್ಯಾಖ್ಯಾನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜರು ಯುದ್ಧದಲ್ಲಿ ಸೋತ ಸಂದರ್ಭದಲ್ಲಿ ಸೋತವರನ್ನು ಅವಮಾನಿಸಲು ನನ್ನ ಧರ್ಮವನ್ನು ಸ್ವೀಕಾರ ಮಾಡಬೇಕು ಎಂದು ಹೀಯಾಳಿಸುತ್ತಿದ್ದುದು ದಾಖಲಾಗಿದೆ. ಆದರೆ, ಅದು ಧರ್ಮಪ್ರಚಾರವಾಗಲ್ಲ ಎಂದ ಅವರು, ರಾಜರು ದಾಳಿ ಮಾಡಿ, ದೋಚಿಕೊಂಡು ಹೋಗಲು ರಾಜಕೀಯ ಕಾರಣಗಳಿದ್ದವು ಎಂದರು.

ದೇಶದ ಸ್ವಾತಂತ್ರಕ್ಕಾಗಿ ಭಗತ್‌ಸಿಂಗ್, ಗಾಂಧಿ, ನೆಹರು ಹೀಗೆ ಅನೇಕರು ಹೋರಾಟ ಮಾಡಿದರು. ಬಳಿಕ ದೇಶಕ್ಕಾಗಿ ಅಂಬೇಡ್ಕರ್‌ರಂತಹವರು ಹುಟ್ಟಿಕೊಂಡರು. ಸ್ವಾತಂತ್ರ ನಂತರ ಮುಸ್ಲಿಮ್ ಲೀಗ್ ಹಾಗೂ ಹಿಂದೂ ಮಹಾಸಭಾ ಆರಂಭವಾದವು. ಇವೆರಡೂ ತಮ್ಮ ಧರ್ಮದ ದೇಶ ಕಟ್ಟುವ ಕಡೆಗೆ ಯೋಚನೆ ಮಾಡಿದವು ಎಂದು ಹೇಳಿದರು.

ಸ್ವಾತಂತ್ರಕ್ಕಾಗಿ ಹೋರಾಡಿದವರು ದೇಶದ ನೈಜ ಸಮಸ್ಯೆಗಳನ್ನು ಮುಂದಿಟ್ಟರೆ, ಇದೀಗ ಆರೆಸ್ಸೆಸ್ ರಾಮಮಂದಿರ, ಗೋ ಹತ್ಯೆಯನ್ನು ಮುಂದಿಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ರೈತರ ಆತ್ಮಹತ್ಯೆ, ನಿರುದ್ಯೋಗದಂತಹ ಸಮಸ್ಯೆಗಳು ಗಮನಕ್ಕೆ ಬರುತ್ತಿಲ್ಲ ಎಂದು ಅವರು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕುರಿತು ಅಂದಿನ ಮಹಾರಾಜ ಹರಿಸಿಂಗ್ ಹಾಗೂ ಸರಕಾರದ ನಡುವೆ ನಡೆದ ಒಪ್ಪಂದವನ್ನು ಬದಲಿಸುವ ವೇಳೆ ಆಯಾ ರಾಜ್ಯದ ಶಾಸಕಾಂಗದ ಅನುಮತಿ ಪಡೆಯಬೇಕು. ಇದನ್ನು ಸಂವಿಧಾನದ 3ನೆ ಪರಿಚ್ಛೇದದಲ್ಲಿ ಉಲ್ಲೇಖವಿದೆ. ಆದರೆ, ಏನೂ ಇಲ್ಲದೇ ಏಕಾಏಕಿ ಮಾಡಿರುವುದು ಸರಿಯಲ್ಲ ಎಂದರು.

ದೇಶದ ಯಾವುದೇ ರಾಜ್ಯದ ಗಡಿ ಬದಲಾಯಿಸಲು, ರಾಜ್ಯ ವಿಸ್ತರಣೆ ಹಾಗೂ ಕಡಿತ ಮಾಡಲು ಕೇಂದ್ರಕ್ಕೆ ಅವಕಾಶವಿದೆ. ಆದರೆ, ಅದಕ್ಕೂ ಮೊದಲು ಅಲ್ಲಿನ ಶಾಸಕಾಂಗದ ಅನುಮತಿ ಪಡೆಯಬೇಕಿದೆ. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಕೇಂದ್ರವೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಸಂವಿಧಾನ ಉಲ್ಲಂಘನೆ ಮತ್ತು ದೇಶದ್ರೋಹದ ಕೆಲಸ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಎಂ.ಎಸ್.ಆಶಾದೇವಿ ಭಾರತದ ಬಹುತ್ವಕ್ಕೆ ಎದುರಾಗಿರುವ ಸವಾಲುಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.

ಮೈಸೂರು ಸಂಸ್ಥಾನದವರಾದ ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ರಾಜನಾಗಿದ್ದಾರೆ. ಆದರೆ, ಆತನ ಜಯಂತಿಯನ್ನು ಆಚರಣೆ ಮಾಡಲು ಕೆಲವೊಂದು ಮನಸ್ಸುಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರ ಜಯಂತಿಯನ್ನು ಎಲ್ಲರೂ ಸ್ವಾಗತಿಸುತ್ತಾರೆ. ಕರ್ನಾಟಕದಲ್ಲಿ ಯಾಕೆ ಭೇದಭಾವ ಮಾಡಲಾಗುತ್ತಿದೆ.

-ಪ್ರೊ.ರಾಮ್ ಪುನಿಯಾನಿ, ಬರಹಗಾರ ಹಾಗೂ ಸಂಶೋಧಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X